ಇಂದು ರಾಜ್ಯಾದ್ಯಂತ ಅಷ್ಟೇ ಅಲ್ದೇ ವಿಶ್ವಾದ್ಯಂತ ಅದ್ಧೂರಿಯಾಗಿ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಗಂಧದ ಗುಡಿ ಸಾಕ್ಷ್ಯ ಚಿತ್ರ ರಿಲೀಸ್ ಆಗಿದೆ.. ಅಭಿಮಾನಿಗಳು ಪ್ರೀತಿಯಿಂದ ಅದ್ಧೂರಿಯಾಗಿ ಸಂಭ್ರಮದಿಂದ ಗಂಧದ ಗುಡಿ ಬರಮಾಡಿಕೊಂಡಿದ್ದಾರೆ..
ಈ ಸಿನಿಮಾ ಕರುನಾಡಿಗರು , ಅಭಿಮಾನಿಗಳ ಜೊತೆಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದೆ.. ಪೇಯ್ಡ್ ಪ್ರೀಮಿಯರ್ ಶೋನಲ್ಲೇ ಬಹುತಯೇಕ ಸ್ಟಾರ್ ಗಳು ಸಿನಿಮಾವನ್ನ ವೀಕ್ಷಿಸಿದ್ದಾರೆ..
ಸೆಲೆಬ್ರಿಟಿಗಳಿಗಾಗಿಯೇ ಆಯೋಜನೆದ ಮಾಡಲಾಗಿದ್ದ ಶೋನಲ್ಲಿ ಹಲವಾರು ಸ್ಟಾರ್ ಗಳು , ತಂತ್ರಜ್ಞರು , ನಿರ್ದೇಶಕ , ನಿರ್ಮಾಕರು , ಸಿನಿಮಾರಂಗದವರು ಸಿನಿಮಾ ವೀಕ್ಷಿಸಿ , ಸೋಷಿಯಲ್ ಮೀಡಿಯಾದಲ್ಲಿ ರಿವ್ಯೂ ಬರೆದುಕೊಂಡಿದ್ದಾರೆ..
ಅಂತೆಯೇ ಕಾಂತಾರ ಹೀರೋ ರಿಷಭ್ ಶೆಟ್ಟಿ ಕೂಡ ಟ್ವೀಟ್ ಮಾಡಿದ್ದಾರೆ..
ಸಿನಿಮಾ ನೋಡಿ ಏನು ಅನಿಸಿತು ಎನ್ನುವುದನ್ನು ಹೇಳುವುದು ಕಷ್ಟ. ಸಿನಿಮಾದಲ್ಲಿ ಎಲ್ಲರೂ ಹೀರೊ ಆಗುತ್ತಾರೆ. ನಿಜ ಜೀವನದಲ್ಲಿ ವಿಶ್ವಮಾನವ ಆಗುವುದು ಗ್ರೇಟ್. ಅಪ್ಪು ಏನೆಲ್ಲಾ ಸಂದೇಶ ಕೊಡಬೇಕು ಎಂದಿದ್ದರು, ಅವರು ಏನು ಅನುಭವಿಸಬೇಕು ಎಂದಿದ್ದರು ಎಲ್ಲವೂ ತೆರೆಗೆ ತಂದಿದ್ದಾರೆ.
ಪ್ರತಿಯೊಬ್ಬ ಕನ್ನಡಿಗ ಯಾವುದೇ ಮೂಲೆಯಲ್ಲಿ ಇದ್ದರೂ ಈ ಸಿನಿಮಾ ನೋಡಬೇಕು. ಮಕ್ಕಳಿಗೂ ಸಿನಿಮಾ ತೋರಿಸಬೇಕು. ಮುಖ್ಯವಾಗಿ ಅಮೋಘ ವರ್ಷ ಅವರಿಗೆ ಧನ್ಯವಾದ ಹೇಳಬೇಕು. ಅಪ್ಪು ಸರ್ ಆಸೆಪಟ್ಟಂತೆ ತೋರಿಸಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದಿದ್ದಾರೆ..