ಇಂದು ರಾಜ್ಯಾದ್ಯಂತ ಅಷ್ಟೇ ಅಲ್ದೇ ವಿಶ್ವಾದ್ಯಂತ ಅದ್ಧೂರಿಯಾಗಿ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಗಂಧದ ಗುಡಿ ಸಾಕ್ಷ್ಯ ಚಿತ್ರ ರಿಲೀಸ್ ಆಗಿದೆ.. ಅಭಿಮಾನಿಗಳು ಪ್ರೀತಿಯಿಂದ ಅದ್ಧೂರಿಯಾಗಿ ಸಂಭ್ರಮದಿಂದ ಗಂಧದ ಗುಡಿ ಬರಮಾಡಿಕೊಂಡಿದ್ದಾರೆ..
ಈ ಸಿನಿಮಾ ಕರುನಾಡಿಗರು , ಅಭಿಮಾನಿಗಳ ಜೊತೆಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದೆ.. ಪೇಯ್ಡ್ ಪ್ರೀಮಿಯರ್ ಶೋನಲ್ಲೇ ಬಹುತಯೇಕ ಸ್ಟಾರ್ ಗಳು ಸಿನಿಮಾವನ್ನ ವೀಕ್ಷಿಸಿದ್ದಾರೆ..
ಸೆಲೆಬ್ರಿಟಿಗಳಿಗಾಗಿಯೇ ಆಯೋಜನೆದ ಮಾಡಲಾಗಿದ್ದ ಶೋನಲ್ಲಿ ಹಲವಾರು ಸ್ಟಾರ್ ಗಳು , ತಂತ್ರಜ್ಞರು , ನಿರ್ದೇಶಕ , ನಿರ್ಮಾಕರು , ಸಿನಿಮಾರಂಗದವರು ಸಿನಿಮಾ ವೀಕ್ಷಿಸಿ , ಸೋಷಿಯಲ್ ಮೀಡಿಯಾದಲ್ಲಿ ರಿವ್ಯೂ ಬರೆದುಕೊಂಡಿದ್ದಾರೆ..
ಅಂತೆಯೇ ವಿಜಯ್ ರಾಘವೇಂದ್ರ ಅವರು ಕೂಡ ಟ್ವೀಟ್ ಮಾಡಿದ್ದಾರೆ..
ಗಂಧದ ಗುಡಿ ಸಿನಿಮಾ ನೋಡಿ ಮಾತುಗಳೇ ಬರುತ್ತಿಲ್ಲ..ಇದೊಂದು ಅದ್ಭುತ ಸಿನಿಮಾ.,. ಇನ್ನಷ್ಟು ದಶಕಗಳ ಕಾಲ ಅಪ್ಪು ನಮ್ಮ ಜೊತೆ ಇರುತ್ತಾರೆ. ಜೊತೆಯಲ್ಲೇ ಪಕ್ಕದಲ್ಲೇ ಕೂತಿದ್ದಾರೆ ಎನ್ನುವಷ್ಟು ಖುಷಿ. ಅಮೋಘ ವರ್ಷ ಬಹಳ ಚೆನ್ನಾಗಿ ಹೇಳುತ್ತಾರೆ. ಗಂಧದಗುಡಿ ಬರೀ ನಮ್ಮ ನೆನಪಾಗಿ ಅಲ್ಲ ನಮ್ಮ ಮುಂದಿನ ಪೀಳಿಗೆಯ ಮನದ್ದಲ್ಲೂ ಜವಾಬ್ದಾರಿಯಾಗಿ ಇರುತ್ತದೆ ಅಂತ. ಎಮೋಷನಲ್ ಆಗಿ ನಮ್ಮ ಜೊತೆ ಇರುತ್ತದೆ. ನಮ್ಮ ನಿಜವಾದ ವಿಶ್ವಮಾನವ ಅಪ್ಪು ಮಾಮ ಎಂದು ಬರೆದುಕೊಂಡು ಭಾವುಕರಾಗಿದ್ದಾರೆ..