ರಾಜ್ಯಾದ್ಯಂತ ಅಷ್ಟೇ ಅಲ್ದೇ ವಿಶ್ವಾದ್ಯಂತ ಅದ್ಧೂರಿಯಾಗಿ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಗಂಧದ ಗುಡಿ ಸಾಕ್ಷ್ಯ ಚಿತ್ರ ರಿಲೀಸ್ ಆಗಿದೆ.. ಅಭಿಮಾನಿಗಳು ಪ್ರೀತಿಯಿಂದ ಅದ್ಧೂರಿಯಾಗಿ ಸಂಭ್ರಮದಿಂದ ಗಂಧದ ಗುಡಿ ಬರಮಾಡಿಕೊಂಡಿದ್ದಾರೆ..
ಈ ಸಿನಿಮಾ ಕರುನಾಡಿಗರು , ಅಭಿಮಾನಿಗಳ ಜೊತೆಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದೆ.. ಪೇಯ್ಡ್ ಪ್ರೀಮಿಯರ್ ಶೋನಲ್ಲೇ ಬಹುತಯೇಕ ಸ್ಟಾರ್ ಗಳು ಸಿನಿಮಾವನ್ನ ವೀಕ್ಷಿಸಿದ್ದಾರೆ..
ಸೆಲೆಬ್ರಿಟಿಗಳಿಗಾಗಿಯೇ ಆಯೋಜನೆದ ಮಾಡಲಾಗಿದ್ದ ಶೋನಲ್ಲಿ ಹಲವಾರು ಸ್ಟಾರ್ ಗಳು , ತಂತ್ರಜ್ಞರು , ನಿರ್ದೇಶಕ , ನಿರ್ಮಾಕರು , ಸಿನಿಮಾರಂಗದವರು ಸಿನಿಮಾ ವೀಕ್ಷಿಸಿ , ಸೋಷಿಯಲ್ ಮೀಡಿಯಾದಲ್ಲಿ ರಿವ್ಯೂ ಬರೆದುಕೊಂಡಿದ್ದಾರೆ..
ಇದೀಗ KGF ಖ್ಯಾತಿಯ ಪ್ರಶಾಂತ್ ನೀಲ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ..
ಇಂತಹ ಅತ್ಯದ್ಭುತ ಹಾಗೂ ದೀರ್ಘಕಾಲ ನೆನಪಿರುವಂತಹ ಅನುಭವವನ್ನು ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್, ಅಮೋಘವರ್ಷ ಹಾಗೂ ಇಡೀ ಗಂಧದಗುಡಿ ಚಿತ್ರ ತಂಡಕ್ಕೆ ಧನ್ಯವಾದಗಳು, ಕನ್ನಡ ತಾಯಿಯ ಮಗನಾದ ಪುನೀತ್ ರಾಜ್ ಕುಮಾರ್ ಅವರಿಗಿಂತ ನಮ್ಮ ಕರ್ನಾಟಕವನ್ನು ಬೇರೆ ಯಾರಿಗೂ ಇಷ್ಟು ಚೆನ್ನಾಗಿ ತೋರಿಸಲು ಸಾಧ್ಯವಿಲ್ಲ, ಇಂಥ ಚಿತ್ರವನ್ನು ನಮಗೆ ನೀಡಿದ್ದಕ್ಕೆ ಧನ್ಯವಾದಗಳು ಡಾ ಪುನೀತ್ ರಾಜ್ ಕುಮಾರ್ ಸರ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ..