ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ನಿನ್ನೆಗೆ ( ಅಕ್ಟೋಬರ್ 29) ಒಂದು ವರ್ಷ ಪೂರ್ಣಗೊಂಡಿದೆ..
ಅವರನ್ನ ಕರುನಾಡಿಗರು , ಸಿನಿಮಾ ತಾರೆಯರು , ರಾಜಕೀಯ ನಾಯಕರು , ಅಭಿಮಾನಿಗಳು ಸ್ಮರಿಸುತ್ತಿದ್ದಾರೆ.. ಎಲ್ಲೆಲ್ಲೂ ಅಪ್ಪು ಮಯವಾಗಿದೆ.. ಸೋಷಿಯಲ್ ಮೀಡಿಯಾ ಮೂಲಕ ಅಪ್ಪುರನ್ನ ನೆನೆದು ಗಣ್ಯರು ಪೋಸ್ಟ್ ಹಾಕುತ್ತಿದ್ದಾರೆ.
ಅಂತೆಯೇ…
ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೂರ್ಯನೊಬ್ಬ ಚಂದ್ರನೊಬ್ಬ, ರಾಜನೂ ಒಬ್ಬ, ಈ ರಾಜನೂ ಒಬ್ಬ.. ಮತ್ತೆ ಹುಟ್ಟಿ ಬನ್ನಿ, ಅಪ್ಪು ಎಂದು ಬರೆದುಕೊಂಡಿದೆ.