Surya – Hombale Films : ಸೂಪರ್ ಹೀರೋ ಸಿನಿಮಾದಲ್ಲಿ ಸೂರ್ಯ..??
ಈಗಾಗಲೇ ಭಾಷೆಯ ಗಡಿ ದಾಟಿ ಸಿನಿಮಾಗಳನ್ನ ನಿರ್ಮಿಸುತ್ತಿರುವ ಹೊಂಬಾಳೆ KGF ಮೂಲಕ ಇಡೀ ವಿಶ್ವಕ್ಕೆ ಕನ್ನಡ ಿಂಡಸ್ಟ್ರಿಯ ಪವರ್ ತೋರಿಸಿದೆ.. ಸಲಾರ್ ಮೂಲಕ ತೆಲುಗಿನ ಸಿನಿಮಾವನ್ನೂ ಮಾಡುತ್ತಿದೆ..
ಸದ್ಯ ಮಲಯಾಳಂನಲ್ಲಿ ಈಗಾಗಲೇ ಫಹಾದ್ , ಪೃಥ್ವಿ ಸುಕುಮಾರ್ ಜೊತೆಗೆ ಟೈಟಲ್ ಸಮೇತ ಸಿನಿಮಾ ಘೋಷಿಸಿದೆ.. ತಮಿಳಿನಲ್ಲೂ ಸಿನಿಮಾ ಮಾಡುತ್ತಿದೆ..
ಸುಧಾ ಕೊಂಗರ ಅವರ ಜೊತೆಗೆ ಪ್ರಾಜೆಕ್ಟ್ ಒಂದು ಘೋಷಣೆಯಾಗಿದೆ.. ಆದ್ರೆ ನಾಯಕ ಯಾರೆಂಬ ಸಸ್ಪೆನ್ಸ್ ಕಾಯ್ದಿರಿಸಿದ್ದು , ಸೂರ್ಯ ಈ ಸಿನಿಮಾದಲ್ಲಿ ನಟಿಸಬಹುದೆಂಬ ಅಂದಾಜಿತ್ತು.. ನಂತರ ತಮಿಳಿನ ಸ್ಟಾರ್ ನಟ ಸಿಂಬು ಈ ಸಿನಿಮಾದಲ್ಲಿ ನಟಿಸಬಹುದೆಂದೂ ಹೇಳಲಾಗ್ತಿದೆ..
ಇದೀಗ ಸೂರ್ಯ ಜೊತೆಗೆ ಹೊಂಬಾಳೆ ಫಿಲಮ್ಸ್ ಒಂದು ದೊಡ್ಡ ಪ್ರಾಜೆಕ್ಟ್ ಗೆ ಕೈಹಾಕಿದ್ದು , ಇದೊಂದು ಸೂಪರ್ ಹೀರೋ ಸಿನಿಮಾ ಎನ್ನಲಾಗ್ತಿದೆ..
ಹೌದು..!
1962 ರಲ್ಲಿ ಮೊದಲ ಬಾರಿಗೆ ಪಬ್ಲಿಷ್ ಆದ ದಿ ಸ್ಟೀಲ್ ಕ್ಲಾವ್ ಕಾಮಿಕ್ಸ್ ಅನ್ನು ಆಧರಿಸಿ ಸೂಪರ್ ಹೀರೋ ಸಿನಿಮಾ ನಿರ್ಮಾಣಕ್ಕೆ ಹೊಂಬಾಳೆ ಮುಂದಾಗಿದೆ.. ಇದಕ್ಕೆ ಸೂರ್ಯ ಹೀರೋ ಎನ್ನಲಾಗ್ತಿದೆ..
ಅಷ್ಟೇ ಅಲ್ಲ…
ಹೊಂಬಾಳೆ , ಸೂರ್ಯ ಕಾಂಬಿನೇಷನ್ ನ ಈ ಸಿನಿಮಾಗೆ ವಿಕ್ರಮ್ ಸಿನಿಮಾ ಖ್ಯಾತಿಯ ಲೋಕೇಶ್ ಕನಕರಾಜನ್ ಅವರು ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗ್ತಿದ್ದು , ಈ ಸುದ್ದಿ ಹಲ್ ಚಲ್ ಸೃಷ್ಟಿ ಮಾಡಿದೆ..