GuruShishyaru : ಒಟಿಟಿಗೆ ಯಾವಾಗ ಬರಲಿದೆ ಶರಣ್ ನಟನೆಯ ಗುರುಶಿಷ್ಯರು..!!?
ಅಕ್ಟೋಬರ್ – ನವೆಂಬರ್ ನಲ್ಲಿ ಸಾಕಷ್ಟು ಕನ್ನಡ , ತಮಿಳು , ತೆಲುಗು ಸಿನಿಮಾಗಳು ರಿಲೀಸ್ ಆಗಿ ಕೆಲವು ಸೂಪರ್ ಹಿಟ್ ಆದ್ರೆ ಇನ್ನೂ ಕೆಲವು ಆವರೇಜ್ ಹಾಗೂ ಫ್ಲಾಪ್ ಆದವು..
ಸ್ಯಾಂಡಲ್ ವುಡ್ ನಲ್ಲಿ ಶರಣ್ ನಟನೆಯ ಬಹುನಿರೀಕ್ಷೆಯ ಹಾಸ್ಯ ಕ್ರೀಡಾ ಪ್ರಧಾನ ಗುರುಶಿಷ್ಯರು ಸಿನಿಮಾ ರಿಲೀಸ್ ಆಗಿ ಸೂಪರ್ ರೆಸ್ಪಾನ್ಸ್ ಪಡೆಯಿತು.. ಒಳ್ಳೆಯ ರಿವ್ಯೂವ್ ಪಡೆಯಿತು.. ಗುರುಶಿಷ್ಯರ ನಡುವಿನ ಬಾಂಧವ್ಯ , ದೇಸಿ ಕ್ರೀಡೆ ಕೊಕೋ ಬಗ್ಗೆ ಸಿನಿಮಾ ಇದಾಗಿತ್ತು.. ಆದ್ರೆ ಕಾಂತಾರ ಸಿನಿಮಾದ ಕ್ರೇಜ್ ನಿಂದಾಗಿ ಶೋಗಳ ಸಂಖ್ಯೆ ಕಳೆದುಕೊಂಡಿತ್ತು..
ಇದೀಗ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ..
ಗುರು ಶಿಷ್ಯರು ಶರಣ್ ಹಾಗೂ ನಿಶ್ವಿಕಾ ನಾಯ್ಡು ನಾಯಕ ಮತ್ತು ನಾಯಕಿಯಾಗಿ ಅಭಿನಯಿಸಿದ್ದ ಗುರು ಶಿಷ್ಯರು ಚಿತ್ರ ಇದೇ ತಿಂಗಳ 11ರಿಂದ ಜೀ ಫೇವ್ ಅಪ್ಲಿಕೇಶನ್ನಲ್ಲಿ ವೀಕ್ಷಿಸಲು ಲಭ್ಯವಿರಲಿದೆ. ಈ ಕುರಿತಾಗಿ ಜೀ ಫೈವ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದು ಮಾಹಿತಿಯನ್ನು ಹಂಚಿಕೊಂಡಿದೆ.