Ramya : ‘ಉತ್ತರಕಾಂಡ’ ಸ್ಕ್ರಿಪ್ಟ್ ಬಗ್ಗೆ ರಮ್ಯಾ ಮಾತು..!!
ರಮ್ಯಾ ರಾಜ್ ಬಿ ಶೆಟ್ಟಿ ಜೊತೆಗೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ನಟನೆಯ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಎಂಬ ಖುಷಿಯಲ್ಲಿದ್ದ ಅಭಿಮಾನಿಗಳು ಈ ಸಿನಿಮಾದಿಂದ ರಮ್ಯಾ ಡ್ರಾಪ್ ಔಟ್ ಆದ ನಂತರ ನಿರಾಸೆಗೊಂಡಿದ್ದರು.
ಆದ್ರೀಗ ರಮ್ಯಾ ಡಾಲಿ ಧನಂಜಯ್ ಜೊತೆಗೆ ಉತ್ತರಕಾಂಡ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡ್ತಿರುವುದು ಖಚಿತವಾಗಿದ್ದು ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ..
ಮುಹೂರ್ತ ಕಾರ್ಯಕ್ರಮದಲ್ಲಿ ಸೀರೆಯಲ್ಲಿ ರಮ್ಯಾ ಸಖತ್ ಮಿಂಚಿದ್ರೆ , ಡಾಲಿ ಕೂಡ ಪಂಚೆ ಶರ್ಟ್ ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು ರಮ್ಯಾ ಕಮ್ ಬ್ಯಾಕ್ ಸುದ್ದಿ , ಡಾಲಿ ಜೊತೆಗೆ ನಟನೆ ವಿಚಾರದಿಂದ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ..
ಭಾನುವಾರ ಚಿತ್ರದ ಮುಹೂರ್ತ ನೆರವೇರಿದೆ. ಈ ಕುರಿತ ಮಾಹಿತಿಯನ್ನ ಡಾಲಿ ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ.
ಅಂದ್ಹಾಗೆ ಈ ಸಿನಿಮಾದ ಬಗ್ಗೆ ಮಾತನಾಡಿರುವ ರಮ್ಯಾ, ಟ್ವೀಟ್ ಮಾಡಿದ್ದು , ಹತ್ತು ವರ್ಷಗಳ ನಂತರ `ಉತ್ತರಕಾಂಡ’ ಮೂಲಕ ನಾನು ಬೆಳ್ಳಿ ಪರದೆಗೆ ಹಿಂತಿರುಗುತ್ತಿದ್ದೇನೆ. ಈ ಹಿಂದೆ ರತ್ನನ್ ಪ್ರಪಂಚದಲ್ಲಿ ಮಾಡೋಕಾಗಿಲ್ಲ ಎಂಬ ಬೇಸರ ಇತ್ತು. ಆದರೆ ಈಗ ಅದೇ ಸಿನಿಮಾ ತಂಡ ಜೊತೆ ಸಿನಿಮಾ ಮಾಡ್ತಿರೋದು ತುಂಬಾ ಸಂತೋಷದ ವಿಚಾರ. ಸ್ಕ್ರಿಪ್ಟ್ ಚಿಂದಿಯಾಗಿದೆ. ದೈತ್ಯ ಪ್ರತಿಭೆಗಳ ಜೊತೆ ಕೆಲಸ ಮಾಡಲು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ..
ಈ ಸಿನಿಮಾ ಮೂಹರ್ತ ಕಾರ್ಯಕ್ರಮದಲ್ಲಿ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್ಕುಮಾರ್ ಸೇರಿ ಗಣ್ಯರು ಭಾಗಿಯಾಗಿದ್ದರು. ವಿಜಯ್ ಕಿರಗಂದೂರು ಅರ್ಪಿಸುವ ಈ ಸಿನಿಮಾವನ್ನು ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್ ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸುತ್ತಿದ್ದು, ಇದು ಧನಂಜಯ್ ಹಾಗೂ ರೋಹಿತ್ ಕಾಂಬಿನೇಷನ್ ನ ಎರಡನೇ ಸಿನಿಮಾ ಆಗಿದೆ.
ಧನಂಜಯ್ ನಾಯಕನಾಗಿ ನಟಿಸುತ್ತಿರುವ 6 ನೇ ಸಿನಿಮಾವಾಗಿದೆ..