Kantara : ರಿಷಬ್ ಶೆಟ್ಟಿ ಕಾಲಿಗೆ ಬೀಳಿ ಎಂದು ‘ಮಠ’ ನಿರ್ದೇಶಕರಿಗೆ ಹೇಳಿದ ರಿಷಿ ಕುಮಾರ ಸ್ವಾಮಿ
ವರ್ಷಗಳ ಹಿಂದೆ ಜಗ್ಗೇಶ್ ಅವರ ಮಠ ಸಾಕಷ್ಟು ಸದ್ದು ಮಾಡಿತ್ತು.. ವಿವಾದಗಳನ್ನೂ ಸೃಷ್ಟಿ ಮಾಡಿತ್ತು.. ಇದೀಗ ಚಂದನವನದಲ್ಲಿ ಮತ್ತೊಂದು ಮಠ ಹೆಸರಿನ ಸಿನಿಮಾ ರಿಲೀಸ್ ಆಗಿದ್ದು , ಈ ಸಿನಿಮಾಗೂ ರಿಷಬ್ ಶೆಟ್ಟಿ ಕಾಂತಾರ ಸಿನಿಮಾಗೂ ಹೋಲಿಕೆ ಮಾಡಿ ಮಾತನಾಡುತ್ತಾ ರಿಷಿ ಕುಮಾರ ಸ್ವಾಮಿಗಳು ಮಠ ಸಿನಿಮಾದ ನಿರ್ದೇಶಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ..
ರಿಷಬ್ ಶೆಟ್ಟರ ಕಾಲಿಗೆ ಬಿದ್ದು ಬನ್ನಿ ಎಂದಿದ್ದಾರೆ.. ರವೀಂದ್ರ ವಂಶಿ ನಿರ್ದೇಶನದಲ್ಲಿ ತಯಾರಾಗಿರುವ ಮಠ ಸಿನಿಮಾ ಬಗ್ಗೆ ಸ್ವಾಮೀಜಿಗಳು ಗರಂ ಆಗಿದ್ದಾರೆ.. ಈ ಸಿನಿಮಾದಲ್ಲಿ ಮೊದಲ ಮಠ ಸಿನಿಮಾ ಮಾಡಿದ್ದ ಗುರುಪ್ರಸಾದ್, ತಬಲಾ ನಾಣಿ, ಮಂಡ್ಯ ರಮೇಶ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮಠಗಳಿಗೆ ಮತ್ತು ಸ್ವಾಮೀಜಿಗಳಿಗೆ ಅವಮಾನಿಸಲಾಗಿದೆ ಎಂದು ಆರೋಪಿಸಲಾಗಿದೆ.. ಇದೇ ಕಾರಣಕ್ಕೆ ಸ್ವಾಮೀಜಿ ಗರಂ ಆಗಿದ್ದಾರೆ.
ಮಠ ಸಿನಿಮಾದ ಬಗ್ಗೆ ಮಾತನಾಡಿರುವ ರಿಷಿ ಕುಮಾರ್ ಸ್ವಾಮೀಜಿಗಳು , ತಾಕತ್ತು ಇದ್ದರೆ ಹಿಂದೂ ಗುರುಗಳ ಬದಲು, ಮೌಲಿಗಳ ಬಗ್ಗೆ ಸಿನಿಮಾ ಮಾಡಿ. ಚರ್ಚ್ ಫಾದರ್ ಗಳ ಬಗ್ಗೆ ಚಿತ್ರ ಮಾಡಲಿ. ಇವರಿಗೆ ಹಿಂದೂ ಧರ್ಮ ಗುರುಗಳೇ ಟಾರ್ಗೆಟ್ ಯಾಕೆ..?? ಎಂದು ಪ್ರಶ್ನೆ ಮಾಡಿದ್ದಾರೆ. ಮಠ ಸಿನಿಮಾದಲ್ಲಿ ಏನೆಲ್ಲ ಆವಾಂತರಗಳು ಆಗಿವೆ ಎನ್ನುವುದು ತಿಳಿದಿದೆ ಎಂದಿದ್ದಾರೆ..
ಮೌಲಿಗಳ ಬಗ್ಗೆ ಸಿನಿಮಾ ಮಾಡಲಿ ಚರ್ಚ್ ಫಾದರ್ ಗಳ ಬಗ್ಗೆ ಸಿನಿಮಾ ಮಾಡಲಿ. ಹಿಂದು ಸ್ವಾಮಿಗಳ ಬಗ್ಗೆ ಸಿನಿಮಾ ಮಾಡಿ ಕಾಸು ಮಾಡ್ಬೇಡಿ. ಈ ಸಿನಿಮಾ ರಿಲೀಸ್ ಆಗದಂತೆ ನೋಡಿ ಕೊಳ್ಳಿ ಅಂತ ಸ್ವಾಮಿಜಿಗಳಿಗೆ ರಿಷಿಕುಮಾರ್ ಮನವಿ ಮಾಡಿದ್ದಾರೆ. ಮಠ ಸಿನಿಮಾನ ಸ್ವಾಮಿಜಿಗಳಿಗೆ ತೋರಿಸಿ ಆಮೇಲೆ ರಿಲೀಸ್ ಮಾಡ್ಬೇಕು ಅಂತ ಸಲಹೆ ನೀಡಿದ್ದಾರೆ.