The Vaccine War : ಕನ್ನಡ ಸೇರಿ 11 ಭಾಷೆಗಳಲ್ಲಿ ಸಿನಿಮಾ..!!
ಇಡೀ ದೇಶಾದ್ಯಂತ ಸಂಚಲವನ್ನೇ ಸೃಷ್ಟಿಸಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಸಿಕ್ಕಾಪಟ್ಟೆ ಮೋಡಿ ಮಾಡಿತ್ತು.. ಅಂದ್ಹಾಗೆ ಈ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಗಹೋತ್ರಿ ಅವರು ದೆಹಲಿ ಫೈಲ್ಸ್ ಸಿನಿಮಾದಲ್ಲಿ ಬ್ಯುಸಿಯಾಗ್ತಿದ್ದರು..
ಆದ್ರೆ ಇದೀಗ ಧಿಡೀರ್ The Vaccine War ಸಿನಿಮಾವನ್ನ ಘೋಷಣೆ ಮಾಡಿದ್ದಾರೆ..
ಈ ಮೂಲಕ ವಿವೇಕ್ ಅಗ್ನಿಹೋತ್ರಿ ಮತ್ತೊಂದು ನೈಜ ಘಟನೆಗಳನ್ನ ಆಧಾರಿತ ಕಥೆಯನ್ನ ತೆರೆಗೆ ತರಲು ಮುಂದಾಗಿದ್ದಾರೆ. ಚಿತ್ರಕ್ಕೆ ‘ದಿ ವ್ಯಾಕ್ಸಿನ್ ವಾರ್’ ಎಂದು ನಾಮಕರಣ ಮಾಡಲಾಗಿದೆ. ಒಂದು ಅಂದಾಜಿನ ಪ್ರಕಾರ ಕರೋನಾ ಸಮಯದಲ್ಲಿ ವ್ಯಾಕ್ಸಿನ್ ತಯಾರಿಕೆಯ ಪ್ರಯತ್ನಗಳ ಬಗ್ಗೆ ತಿಳಿಸಲಿದೆ.
ಇತ್ತೀಚೆಗೆ ಟ್ವೀಟ್ ಮಾಡಿರುವ ವಿವೇಕ್ ಅಗ್ನಿಹೋತ್ರಿ “ಚಿತ್ರವನ್ನ ಪ್ರದರ್ಶಿಸಲಿದ್ದೇವೆ. ಭಾರತ ಯುದ್ಧ ಮಾಡಿ ಗೆದ್ದಿತು. ಆದರೆ… ಅದರ ಬಗ್ಗೆ ನಿಮಗೆ ತಿಳಿದಿಲ್ಲ. ಆ ಅದ್ಭುತ ನೈಜ ಕಥೆಯೊಂದಿಗೆ ಬರುತ್ತಿದ್ದೇವೆ. ಆ ಯುದ್ಧವು ವಿಜ್ಞಾನ, ಧೈರ್ಯ ಮತ್ತು ಶ್ರೇಷ್ಠ ಭಾರತೀಯ ಮೌಲ್ಯಗಳಿಂದ ಗೆದ್ದಿದೆ. ಈ ಚಿತ್ರ 2023 ರ ಸ್ವಾತಂತ್ರ್ಯ ದಿನದಂದು ತೆರೆಕಾಣಲಿದೆ..
ಅಂದ್ಹಾಗೆ ಈ ಸಿನಿಮಾ ಕನ್ನಡದಲ್ಲೂ ಬರಲಿದ್ಯಂತೆ..
ಹೌದು..!! ಈ ಸಿನಿಮಾ ಕನ್ನಡದಲ್ಲೂ ನಿರ್ಮಾಣವಾಗುತ್ತಿದೆ..
ದಿ ಕಾಶ್ಮೀರ್ ಫೈಲ್ಸ್ ಈ ಹಿಂದೆ ಕೇವಲ ಹಿಂದಿಯಲ್ಲಿ ಮಾತ್ರ ಮೂಡಿ ಬಂದಿತ್ತು.
ಆನಂತರ ಓಟಿಟಿಯಲ್ಲಿ ಕನ್ನಡಕ್ಕೆ ಡಬ್ ಮಾಡಲಾಗಿತ್ತು.
ಇದೀಗ ಈ ಸಿನಿಮಾ ಹಿಂದಿ, ತಮಿಳು, ತೆಲುಗು ಅಷ್ಟೇ ಅಲ್ಲ , ಒಟ್ಟು 11 ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.