Kantara : ಯಶಸ್ಸಿಗಾಗಿ ಕೆಲಸ ಮಾಡಲಿಲ್ಲ..!! ಕೆಲಸಕ್ಕಾಗಿ ಕೆಲಸ ಮಾಡಿದೆ – ರಿಷಬ್
ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರವು ಬಹು ಭಾಷೆಗಳಿಗೆ ಡಬ್ ಆಗಿದ್ದು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಕಾಂತಾರ ಹಿಂದಿ ಆವೃತ್ತಿಯು ದೀಪಾವಳಿಯ ಬಿಡುಗಡೆಯಾದ ಥ್ಯಾಂಕ್ ಗಾಡ್, ರಾಮ್ ಸೇತು ಮತ್ತು ಡಿಸಿ ಚಿತ್ರ ಬ್ಲ್ಯಾಕ್ ಆಡಮ್ಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ. ಕಾಂತಾರ ಹಿಂದಿ ಆವೃತ್ತಿಯು ಗಲ್ಲಾಪೆಟ್ಟಿಗೆಯಲ್ಲಿ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡಿದೆ..
ಈಗಲೂ ಬಾಲಿವುಡ್ ಸಿನಿಮಾಗಳಿಗೆ ಟಕ್ಕರ್ ಕೊಡುತ್ತಿದೆ..
ಸಂದರ್ಶನವೊಂದ್ರಲ್ಲಿ ಮಾತನಾಡಿರುವ ರಿಷಬ್ ಶೆಟ್ಟಿ ಅವರು ಹಿಂದಿ ಸಿನಿಮಾಗಳಲ್ಲಿ ನಟನೆಯ ಬಗ್ಗೆ ಅಭಿಪ್ರಾಯ ಕೇಳಿದಾಗ ತಮಗೆ ಹಿಂದಿ ಸಿನಿಮಾಗಳಲ್ಲಿ ನಟಿಸೋ ಆಸಕ್ತಿಯಿಲ್ಲ.. ನಾನು ಕೇವಲ ಕನ್ನಡ ಸಿನಿಮಾಗಳನ್ನಷ್ಟೇ ಮಾಡುವೆ.. ಅದೇ ಸಿನಿಮಾಗಳನ್ನೇ ಇತರೇ ಭಾಷೆಗಳಿಗೆ ಡಬ್ ಮಾಡುವೆ ಎಂದಿದ್ದರು..
ಅಲ್ಲದೇ ಅವರ ಸಕ್ಸಸ್ ಬಗ್ಗೆ ಎಲ್ಲರೂ ಕೊಂಡಾಡುತ್ತಿದ್ದಾರೆ.. ಸಂದರ್ಶನವೊಂದ್ರಲ್ಲಿ ಈ ಬಗ್ಗೆ ಮಾತನಾಡ್ತಾ ನಾನು ಸಕ್ಸಸ್ ಗಾಗಿ ಕೆಲಸ ಮಾಡಲಿಲ್ಲ.. ಕೆಲಕ್ಕಾಗಿ ಕೆಲಸ ಮಾಡಿದೆ ಎಂದು ಹೇಳುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ..