Ramcharan : ಅಕ್ಷಯ್ ಕುಮಾರ್ ಬಗ್ಗೆ ರಾಮ್ ಚರಣ್ ಮಾತು..!!!
ನಟ ರಾಮ್ ಚರಣ್ RRR ಚಿತ್ರದ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ್ದಾರೆ..
ಸಿನಿಮಾದಲ್ಲಿ ಅವರ ಇಂಟ್ರೋ ದೃಶ್ಯ ಸಿಕ್ಕಾಪಟ್ಟೆ ಕಮ್ರೇಜ್ ಹುಟ್ಟುಹಾಕಿ ಪ್ರೀತಿ ಗಳಿಸಿತ್ತು.. 35 ದಿನಗಳು ಇದೊಂದೇ ಸೀನ್ ಶೂಟಿಂಗ್ ಗೆ ತೆಗೆದುಕೊಂಡಿತ್ತು ಎಂದಿದ್ದಾರೆ..
ಅವರಿಗೆ ಅಲರ್ಜಿಯಿದ್ದರೂ , ಸೈನಸ್ ಸರ್ಜರಿ ಮಾಡಿಸಿಕೊಂಡಿದ್ದರೂ ಅವರು ಹೆಚ್ಚು ಸಮಯ ಧೂಳಿನಲ್ಲಿ ಕೆಲಸ ಮಾಡಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೊಂದಿಗೆ ಲೀಡರ್ ಶಿಪ್ ಶೃಂಗಸಭೆ 2022 ರಲ್ಲಿ ನಟ ಭಾಗವಹಿಸಿದ್ದರು. ಆರಂಭಿಕ ದೃಶ್ಯದ ಬಗ್ಗೆ ಕೇಳಿದಾಗ, ಅಕ್ಷಯ್ ಸಾಮಾನ್ಯವಾಗಿ 40 ದಿನಗಳಲ್ಲಿ ಒಂದು ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸುತ್ತಾರೆ ಮತ್ತು RRR ನ ಆರಂಭಿಕ ದೃಶ್ಯಕ್ಕೆ ಮಾತ್ರ ನಾವು ಅಷ್ಟು ಸಮಯ ತೆಗೆದುಕೊಳ್ಳಬೇಕಾಯ್ತು ಎಂದು ಹೇಳಿದರು. ಕೆಲವು ಸಿನಿಮಾಗಳು ಇಷ್ಟು ಸಮಯದಲ್ಲಿ ಮುಗಿಯುತ್ತವೆ, ಅಕ್ಷಯ್ ಸರ್ 40 ದಿನಗಳಲ್ಲಿ ಸಿನಿಮಾ ಮುಗಿಸಿದ್ದಾರೆ ಅಥವಾ ಆ ರೀತಿ ನಾನು ಕೇಳ್ಪಟ್ಟಿದ್ದೇನೆ” ಎಂದು ರಾಮ್ ಚರಣ್ ಹೇಳಿದ್ದಾರೆ.
ನಾವು ಸುಮಾರು 3000 ರಿಂದ 4000 ಜನರೊಂದಿಗೆ 35 ದಿನಗಳ ಕಾಲ ದೃಶ್ಯವನ್ನು ಚಿತ್ರೀಕರಿಸಿದ್ದೇವೆ. ನನಗೆ ಬಾಲ್ಯದಿಂದಲೂ ಧೂಳಿನ ಅಲರ್ಜಿ ಇತ್ತು, ವಾಸ್ತವವಾಗಿ, ನಾನು ಸೈನಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ನನ್ನ ಹಣೆಬರಹ ನೋಡಿ, ನಾನು 35 ದಿನಗಳ ಕಾಲ ಧೂಳಿನಲ್ಲಿ ಕೆಲಸ ಮಾಡಬೇಕಾಯಿತು ಎಂದಿದ್ದಾರೆ..