Remo : ರಮ್ಯಾಗಾಗಿ ‘ರೇಮೊ’ ಟೈಟಲ್ ಬದಲಾವಣೆಗೆ ಮುಂದಾದ್ರಾ ಪವನ್ ಒಡೆಯರ್..???
ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಸಿನಿಮಾ ನಾಳೆ ಅದ್ದೂರಿಯಾಗಿ ಚಿತ್ರಮಂದಿರದ ಅಂಗಳಕ್ಕೆ ಎಂಟ್ರಿ ಕೊಡುತ್ತಿದೆ. ಸಿನಿ ರಸಿಕರಲ್ಲಿ ಸಖತ್ ಕ್ರೇಜ್ ಸೃಷ್ಟಿಸಿರುವ ಈ ಸಿನಿಮಾ ನೋಡಲು ಕಾತುರದಿಂದ ಪ್ರೇಕ್ಷಕರು ಕಾಯುತ್ತಿದ್ದಾರೆ. ಇಶಾನ್, ಆಶಿಕಾ ರಂಗನಾಥ್ ಜೋಡಿಯ ಈ ಸಿನಿಮಾ ಹಾಡು, ಟ್ರೇಲರ್ ನಿಂದ ಕ್ರೇಜ್ ಸೃಷ್ಟಿಸಿದ್ದಲ್ಲದೇ ಪ್ರಚಾರ ಕಾರ್ಯದಿಂದಲೂ ಗಮನ ಸೆಳೆಯುತ್ತಿದೆ. ಸಿನಿಮಾ ಮೇಲೆ ಸಖತ್ ಹೋಪ್ ಕ್ರಿಯೇಟ್ ಆಗಿ ಪ್ರೇಕ್ಷಕರೆಲ್ಲರೂ ಸಿನಿಮಾ ನೋಡಲು ನಾಳೆಗೆ ಕಾಯುತ್ತಿರುವಾಗಲೇ ಸಿನಿಮಾ ತಂಡ ಟೈಟಲ್ ಚೇಂಜ್ ಮಾಡಲು ನಿರ್ಧಾರ ಮಾಡಿದೆ. ಇದು ಸದ್ಯ ಎಲ್ಲರನ್ನು ದಂಗಾಗಿಸಿದೆ. ಆದ್ರೆ ಇದು ರಿಯಲ್ ಅಲ್ಲ ರೀಲು ಅನ್ನೋದು ಅಷ್ಟೇ ಸತ್ಯ
ಹೌದು, ಪವನ್ ಒಡೆಯರ್, ನಾಯಕ ನಟ ಇಶಾನ್ ಕಾನ್ವರ್ ಸೇಶನ್ ಇರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾ ಅಂಗಳಲ್ಲಿ ವೈರಲ್ ಆಗಿದೆ. ರಮ್ಯಾ ಜೊತೆ ನಟನೆ ಮಾಡಲು ಅವಕಾಶ ಸಿಕ್ಕರೆ ಏನ್ ಮಾಡ್ತೀರಾ ಎಂದು ಪವನ್ ಒಡೆಯರ್ ಇಶಾನ್ ಗೆ ಕೇಳುತ್ತಾರೆ ಆಗ ಇಶಾನ್ ಜೋಶ್ ನಲ್ಲಿ ಒಕೆ ಎನ್ನುತ್ತಾರೆ. ಆದ್ರೆ ಅವರನ್ನು ಮೀಟ್ ಮಾಡೋದು ಹೇಗೆ ಎಂದಾಗ ಪವನ್ ಒಡೆಯರ್ ಅವರಿಗಾಗಿ ಸಿನಿಮಾ ಟೈಟಲನ್ನೇ ರಮ್ಯಾ ಎಂದು ಚೇಂಜ್ ಮಾಡೋಣ ಬಿಡಿ ಎನ್ನುವ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ. ಆದ್ರೆ ಇದು ರಿಯಲ್ ಅಲ್ಲ ರೀಲ್ ಎನ್ನುವುದು ಅಷ್ಟೇ ನಿಜ. ಹೌದು, ಇದು ಸಿನಿಮಾದ ಪ್ರಚಾರದ ನಿಮಿತ್ತ ಚಿತ್ರತಂಡ ಕ್ರಿಯೇಟ್ ಮಾಡಿರುವ ವೀಡಿಯೋ ಕಟೆಂಟ್ ಆಗಿದೆ.
ಮೇಕಿಂಗ್, ಸಿನಿಮಾದ ಪ್ರಾಮಿಸಿಂಗ್ ಸ್ಯಾಂಪಲ್ ಗಳ ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿರುವ ‘ರೇಮೊ’ನಾಳೆ ಬಿಡುಗಡೆಯಾಗುತ್ತಿದೆ. ಜಯಾದಿತ್ಯ ಬ್ಯಾನರ್ ನಡಿ ನಿರ್ಮಾಣವಾದ ಈ ಚಿತ್ರಕ್ಕೆ ಸಿ ಆರ್ ಮನೋಹರ್ ಬಂಡವಾಳ ಹೂಡಿದ್ದು ,ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ.