Vaishnavi : ಮದುವೆ ಮಾತುಕತೆ ಕ್ಯಾನ್ಸಲ್ , ಇಲ್ಲಿಗೆ ನಿಲ್ಲಿಸಿ ಎಂದ ನಟಿ
ಕಿರುತೆರೆಯ ಖ್ಯಾತ ನಟಿ , ಅಗ್ನಿಸಾಕ್ಷಿ ಮೂಲಕ ಮನೆ ಮಾತನಾಗಿ ಬಿಗ್ ಬಾಸ್ ಸೀಸನ್ 8 ರಲ್ಲಿ ಫಿನಾಲೆವರೆಗೂ ಬಂದಿದ್ದ ವೈಷ್ಣವಿ ಇದೀಗ ಗುಟ್ಟಾಗಿ ನಿಶ್ಚತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿತ್ತು..
ಆದ್ರೆ ಮದುವೆ ಮಾತುಕತೆ ರದ್ದಾಗಿದೆ.. ಎಂಗೇಜ್ ಮೆಂಟ್ ಮುರಿದು ಬಿದ್ದಿದೆ.. ಈ ವಿಚಾರವನ್ನ ಎಲ್ಲಿಗೆ ನಿಲ್ಲಿಸಿ,,. ಮುಂದೆ ತೆಗೆದುಕೊಂಡು ಹೋಗ್ಬೇಡಿ ಎಂದು ಖುದ್ದು ವೈಷ್ಣವಿ ಸೋಷಿಯಲ್ ಮೀಡಿಯಾ ಮೂಲಕ ಎಲ್ರಿಗೂ ಸ್ಪಷ್ಟನೆಯನ್ನ ನೀಡಿದ್ದಾರೆ..
ಸದ್ಯಕ್ಕೆ ವೈರಲ್ ಆಗಿರುವ ಫೋಟೋದಲ್ಲಿ ವೈಷ್ಣವಿ ನಿಶ್ಚಿತಾರ್ಥ ಮಾಡಿಕೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತಿತ್ತು.. ಜೊತೆಗೆ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಕೂಡ ಫೋಟೋದಲ್ಲಿ ಕಾಣಿಸಿಕೊಂಡಿದ್ದರು.. ಅಗ್ನಿಸಾಕ್ಷಿಯ ನಟಿಯ ಈ ಫೋಟೋ ವೈರಲ್ ಆಗ್ತಿದ್ದಂತೆ ಅಭಿಮಾನಿಗಳು ಶಾಕ್ ಆಗಿದ್ದರು.
ನಟಿ ವೈಷ್ಣವಿ ಗೌಡ ಜೊತೆ ನಿಶ್ಚಿತಾರ್ಥ ಆಗಿರೋ ಫೋಟೋ ವೈರಲ್ ಆದ ಬೆನ್ನಲ್ಲೇ ನಟಿಯೊಬ್ಬರ ಆಡಿಯೋ ಸದ್ದು ಮಾಡುತ್ತಿದ್ದು, ವಿದ್ಯಾಭರಣ್ ಮೇಲೆ ಅನೇಕ ಆರೋಪಗಳನ್ನ ಮಾಡಿದ್ದಾರೆ.