Pushpa : RRR ನಂತರ ವಿದೇಶದಲ್ಲಿ ಪುಷ್ಪ ಅಬ್ಬರ..!!
RRR ಸಿನಿಮಾದ ನಂತರ ಇದೀಗ ವಿದೇಶದಲ್ಲಿ ಅಬ್ಬರಿಸಲು ಅಲ್ಲು ಅರ್ಜುನ್ ರ ಪುಷ್ಪ ಸಿನಿಮಾ ಸಜ್ಜಾಗಿದೆ..
ಸಖತ್ ಸೆನ್ಷೇಷನ್ ಕ್ರಿಯೇಟ್ ಮಾಡಿ ಬಾಕ್ಸ್ ಆಫೀಸ್ ನಲ್ಲಿರಿಸಿದ ಪುಷ್ಪ ಸಿನಿಮಾ ರಷ್ಯಾದಲ್ಲಿ ಡಿಸೆಂಬರ್ 8 ರಂದು ಮೆಗಾ ಬಿಡುಗಡೆಗೆ ಸಿದ್ಧವಾಗಿದೆ. ಬಹು ಭಾಷೆಗಳಲ್ಲಿ ಮೋಡಿ ಮಾಡಿದ ನಂತರ ಇದೀಗ ಪುಷ್ಪ : ದಿ ರೈಸ್ ರಷ್ಯಾ ಭಾಷೆಯ ಟ್ರೈಲರ್ ಬಿಡುಗಡೆಯಾಗಿದೆ.
ವಿದೇಶಗಳಲ್ಲೂ ಸಕತ್ ಸದ್ದುಮಾಡಿದ ಈ ಚಿತ್ರ ಇದೀಗ ಡಿಸೆಂಬರ್ 8 ರಂದು ರಷ್ಯಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.
ಚಿತ್ರವು ಡಿಸೆಂಬರ್ 1 ರಂದು ಮಾಸ್ಕೋದಲ್ಲಿ ಮತ್ತು ಡಿಸೆಂಬರ್ 3 ರಂದು ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಪ್ರಥಮ ಪ್ರದರ್ಶನವನ್ನು ಕಾಣಲಿದ್ದು ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.
ರಷ್ಯಾದ 24 ನಗರಗಳಲ್ಲಿ ನಡೆಯಲಿರುವ ಐದನೇ ಭಾರತೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿಯೂ ಚಲನಚಿತ್ರವು ಮೊದಲಿಗೆ ಪ್ರದರ್ಶನಗೊಳ್ಳಲಿದೆ.
ಡಿಸೆಂಬರ್ 8 ರಂದು ರಷ್ಯಾದ ತುಂಬೆಲ್ಲ ಚಿತ್ರ ಬಿಡುಗಡೆಯಾಗಲಿದೆ.
ಮತ್ತೊಂದೆಡೆ ಅಲ್ಲು ಅರ್ಜುನ್ ಪುಷ್ಪ 2 ಸಿನಿಮಾದ ತಯಾರಿ ಕೂಡ ಭರದಿಂದ ಸಾಗುತ್ತಿದೆ..
Pushpa to release in russia ,cinibazaar