Kantara : ರಿಷಬ್ ಶೆಟ್ಟಿಗೆ ರಾಷ್ಟ್ರೀಯ ಸಿದ್ಧಶ್ರೀ ಪ್ರಶಸ್ತಿ..!!
ಕಾಂತಾರ ಸಿನಿಮಾ ದಿನೇ ದಿನೇ ಹೊಸ ದಾಖಲೆಗಳನ್ನ ಬರೆಯುತ್ತಿದ್ದು , ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿ ಇದೀಗ ಒಟಿಟಿಯಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ..
ಅಂದ್ಹಾಗೆ ನಿರ್ದೇಶಕ ರಿಷಬ್ ಶೆಟ್ಟಿಗೆ ಇದೀಗ ಮುಗಳಖೋಡ ಮಠದಿಂದ ರಾಷ್ಟ್ರೀಯ ಸಿದ್ಧಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ..
ರಾಷ್ಟ್ರೀಯ ಸಿದ್ಧಶ್ರೀ ಪ್ರಶಸ್ತಿಯು 1 ಲಕ್ಷ ನಗದು, ಎರಡು ತೋಲ ಚಿನ್ನ, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿವೆ.
38ನೇ ಗುರುವಂದಮಾ ಕಾರ್ಯಕ್ರಮದಲ್ಲಿ ಮಠದ ಪೂಜ್ಯ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಮಠಾಧೀಶರು ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಿಷಬ್ ಶೆಟ್ಟಿ , ಸಿದ್ಧಶ್ರೀ ನನ್ನ ನಟನೆಯ ಕಾಂತಾರ ಸಿನೆಮಾಕ್ಕೆ ಸಿಗುತ್ತಿರುವ ಮೊದಲ ಪ್ರಶಸ್ತಿ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ಈ ಪ್ರಶಸ್ತಿಯನ್ನು ನನಗೆ ಪ್ರೇರಣೆ ನೀಡಿದ ಪಂಜುರ್ಲಿ ದೈವ, ಶ್ರೀ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪಸ್ವಾಮಿ, ದೈವ ನರ್ತಕರ ಕುಟುಂಬಕ್ಕೆ ಅಪ9ಣೆ ಮಾಡುತ್ತೆನೆ. ವಿಶೇಷವಾಗಿ ಕನ್ನಡ ನಾಡಿನ ಮೇರುನಟ ದಿ. ಡಾ.ಪುನೀತ್ ರಾಜಕುಮಾರ್ ಹಾಗೂ ಕನ್ನಡ ಜನತೆಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.