Kantara : ರಿಷಬ್ ಶೆಟ್ಟಿಗೆ ಸಲಹೆ ನೀಡಿ , ಎಚ್ಚರಿಕೆ ಕೊಟ್ಟ ಅನುರಾಗ್ ಕಶ್ಯಪ್..!!
ಕಾಂತಾರ ಸಿನಿಮಾದ ಸಕ್ಸಸ್ ಬಗ್ಗೆ ಆಗ್ಲಿ ಅದರ ಕ್ರೇಜ್ ಬಗ್ಗೆ ಆಗಲಿ ಹೇಳೋ ಅವಶ್ಯಕತೆ ಇಲ್ಲ..
16 ಕೋಟಿ ಬಜೆಟ್ ಸಿನಿಮಾ ತಯಾರಾಗಿದ್ದು ಕನ್ನಡ ಭಾಷೆಯಲ್ಲಿ , ಮೊದಲಿಗೆ ರಿಲೀಸ್ ಆಗಿದ್ದೂ ಕೂಡ ಕನ್ನಡದಲ್ಲಿ ಮಾತ್ರವೇ..
ಆದ್ರೆ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಸಿನಿಮಾ ವಿಶ್ವಾದ್ಯಂತ ಸೌಂಡ್ ಮಾಡಿತು..
ಸಿನಿಮಾವನ್ನ ಕನ್ನಡದಲ್ಲೇ ಇಂಗ್ಲಿಷ್ ಸಬ್ ಟೈಟಲ್ಸ್ ನಲ್ಲಿ ಪರಭಾಷಾ ಜನರೂ ನೋಡಿ ಕೊಂಡಾಡಿದ್ದು.. ಸಿನಿಮಾದ ಡಬ್ಬಿಂಗ್ ಗಾಗಿ ಬಂದ ಡಿಮ್ಯಾಂಡ್ ನೋಡಿ ಆ ನಂತರ ಸಿನಿಮಾವನ್ನ ಉಳಿದ ಭಾಷೆಗಳಿಗೂ ರಿಲೀಸ್ ಮಾಡಲಾಯ್ತು..
ಸಿನಿಮಾ 450 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಇಂಡಸ್ಟ್ರಿಯಲ್ ಹಿಟ್ ಲಿಸ್ಟ್ ಗೆ ಸೇರಿತು..
ಈಗ ಒಟಿಟಿಯಲ್ಲಿ ಕಾಂತಾರ ಕಾಡುಬೆಟ್ಟು ‘ಶಿವ’ನ ಅಬ್ಬರ ಜೋರಾಗಿದೆ..
ಸಿನಿಮಾ ಹೊಸ ಹೊಸ ದಾಖಲೆಗಳನ್ನ ಬರೆಯಿತು.. ಪರಭಾಷೆ ಸ್ಟಾರ್ ಗಳು , ಸ್ಯಾಂಡಲ್ ವುಡ್ ತಾರೆಯರು , ರಾಜಕಾರಣಿಗಳು , ಉದ್ಯಮಿಗಳು ಸಿನಿಮಾವನ್ನ ಬಾಯ್ತುಂಬ ಹೊಗಳಿದರು..
ಎಲ್ಲೋ ಒಂದಿದ್ರು ಸಿನಿಮಾದ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ರು..
ಅಂದ್ಹಾಗೆ ಬಾಲಿವುಡ್ ನ ವಿವಾದತ್ಮಾಕ ನಿರ್ಮಾಪಕ , ನಟ, ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಇದೀಗ ಕಾಂತಾರ ಸಿನಿಮಾ ಬಗ್ಗೆ ಮಾತನಾಡಿದ್ದು , ರಿಷಬ್ ಶೆಟ್ಟಿಗೆ ಎಚ್ಚರಿಕೆ ನೀಡಿದ್ದಾರೆ..
ಮರಾಠಿಯ ಸೂಪರ್ ಹಿಟ್ ಸಿನಿಮಾ ಸೈರಾಟ್ ನಿರ್ದೇಶಕ ನಾಗರಾಜ್ ಮಂಜುಲೆಗೆ ಈ ಹಿಂದೆ ನೀಡಿದ್ದ ಸಲಹೆಯ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ..
ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕಾಂತಾರ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿಗೆ ಸಲಹೆಯೊಂದನ್ನ ನೀಡಿದ್ದಾರೆ..
ಈ ಹಿಂದೆ ಅನುರಾಗ್ ಮರಾಠಿ ಚಿತ್ರರಂಗವನ್ನು ಸೈರಾಟ್ ಸಿನಿಮಾ ನಾಶಮಾಡಬಹುದು ಎಂದಿದ್ದನ್ನ ಈ ವೇಳೆ ನೆನಪು ಮಾಡಿಕೊಂಡರು..
ಕಾಂತಾರ, ಪುಷ್ಪ, ಕೆಜಿಎಫ್ ನಂತಹ ಸೌತ್ ಸಿನಿಮಾಗಳ ಯಶಸ್ಸಿನ ಬಗ್ಗೆ ಮಾತನಾಡಿದ ಅನುರಾಗ್ ಕಶ್ಯಪ್, ಒಂದು ಚಿತ್ರದ ಯಶಸ್ಸಿನಿಂದ ನಿರ್ಮಾಪಕರು ಏನು ಕಲಿಯುತ್ತಾರೆ ಎಂಬುವುದು ಬಹಳ ಮುಖ್ಯವಾಗುತ್ತದೆ , ಪ್ಯಾನ್ ಇಂಡಿಯಾ ಚಿತ್ರಗಳನ್ನು ಮಾಡುವುದರಿಂದ ಇದೀಗ ಏನಾಗುತ್ತಿದೆ ಎಂದರೆ ಎಲ್ಲರೂ ಪ್ಯಾನ್-ಇಂಡಿಯನ್ ಚಲನಚಿತ್ರವನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವುಗಳಲ್ಲಿ 5% ಅಥವಾ 10% ಯಶಸ್ಸು ಗಳಿಸುತ್ತವೆ.
ಕಾಂತಾರ, ಪುಷ್ಪದಂತಹ ಚಿತ್ರವು ಹೊರಗಿನ ಪ್ರಪಂಚಕ್ಕೆ ನಿಮ್ಮ ಕಥೆಯನ್ನು ಹೇಳಲು ನಿಮಗೆ ಧೈರ್ಯವನ್ನು ನೀಡುತ್ತದೆ. ಆದರೆ ಕೆಜಿಎಫ್ ನಂತಹ ಎಷ್ಟೇ ದೊಡ್ಡ ಯಶಸ್ಸು ಪಡೆಯಲು ನೀವು ಯೋಜನೆಯನ್ನು ಹೊಂದಿ ಪ್ರಯತ್ನಿಸಿದರೆ, ಅದು ಅವನತಿಯತ್ತ ಸಾಗಲು ಪ್ರಾರಂಭಿಸುತ್ತದೆ. ಈ ರೀತಿಯಾಗಿಯೇ ಬಾಲಿವುಡ್ ತನ್ನನ್ನು ತಾನೇ ನಾಶಪಡಿಸಿಕೊಂಡಿದೆ..
ನಟ ರಿಷಬ್ ಶೆಟ್ಟಿ ಅವರು ತಮ್ಮ ಸೊಗಡಿಗೆ ತಕ್ಕಂತೆ ಚಿತ್ರವನ್ನು ಮಾಡಿ ಗೆದಿದ್ದಾರೆ. ಅದೇ ಒಂದು ವೇಳೆ ಸಿನಿಮಾ ವೈಖರಿಯನ್ನು ಬದಲಾಯಿಸದೆ ಮತ್ತು ಬಾಕ್ಸ್ ಆಫೀಸ್ನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಬಜೆಟ್ ಚಿತ್ರಗಳನ್ನು ಮಾಡಲು ಪ್ರಾರಂಭಿಸಿದರೆ ಅದು ಸರಿಯಲ್ಲ.
ಅದು ಅವರಿಗೆ ಸಂಕಷ್ಟ ತಂದೊಡ್ಡಬಹುದು. ಸಿನಿಮಾ ಮಾಡುವ ಅವರ ವಿಧಾನ ಮೊದಲಿನಂತೆಯೇ ಇದ್ದರೆ ಉತ್ತಮ ಎಂದು ಸಲಹೆಯನ್ನ ನೀಡಿದ್ದಾರೆ..