Rishabh Shetty : ‘ಕಾಯಕವೇ ಕೈಲಾಸ’ ರಾಷ್ಟ್ರೀಯ ಮಾಧ್ಯಮದಲ್ಲಿ ರಿಷಬ್ ಕನ್ನಡ ಪ್ರೇಮ..!!
ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿರುವ ರಿಷಬ್ ಶೆಟ್ಟಿ ಹೆಮ್ಮೆಯ ಕನ್ನಡ ನಟ ,. ನಿರ್ದೇಶಕ…
ಕಾಂತಾರ ಸಿನಿಮಾದ ಮೂಲಕ ಮತ್ತೊಮ್ಮೆ ಕನ್ನಡ ಸಿನಿಮಾರಂಗದ ಪವರ್ ಇಡೀ ವಿಶ್ವಕ್ಕೆ ತೋರಿಸಿಕೊಟ್ಟವರು..
ಇಷಬ್ ಶೆಟ್ಟಿ ಕಾಂತಾರ ಸಿನಿಮಾವನ್ನ ಅಧ್ಬುತವಾಗಿ ನಿರ್ದೇಶನ ಮಾಡಿದ್ದು ಒಂದೆಡೆ , ಸಿನಿಮಾದಲ್ಲಿ ಅವರ ನಟನೆಗೊಂದು ಸಲಾಂ ಹೇಳಬೇಕು..
ಅದ್ರಲ್ಲೂ ಅವರ ಕ್ಲೈಮ್ಯಾಕ್ಸ್ ಸೀನ್ ಅಲ್ಟಿಮೇಟ್..
ಅಂದ್ಹಾಗೆ ಪ್ರಶಸ್ತಿಗಳ ಮೇಲೆ ಪ್ರಶಸ್ತಿ ಬಾಚಿಕೊಳ್ತಿರುವ ರಿಷಬ್ ಶೆಟ್ಟಿ ಹಲವಾರು ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ..
ಕಳೆದ 10 ವರ್ಷಗಳಿಂದ ಸಿನಿಮಾ ರಂಗದಲ್ಲಿ ಛಾಪು ಮೂಡಿಸಿದ ರಿಷಬ್ ಶೆಟ್ಟಿ ಆಜ್ ತಕ್ ಸಂವಾದ ಕಾರ್ಯಕ್ರಮದಲ್ಲಿ ಇತ್ನಿತೀಚೆಗೆ ಭಾಗಿಯಾಗಿದ್ದಾಗ ಅವರು ಆಡಿರುವ ಮಾತುಗಳು ಇದೀಗ ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದಿದೆ..
ಹೌದು..!
ನಿರೂಪಕಿ 2023 ರ ಅಜೆಂಡಾ ಏನು ಅಂತ ಕೇಳಿದಾಗ ರಿಷಬ್ ಶೆಟ್ಟಿ ಕನ್ನಡಲ್ಲೇ “ಕಾಯಕವೇ ಕೈಲಾಸ” ಎಂದು ಬರೆದು ಆಟೋ ಗ್ರಾಫ್ ಗೆ ಸಹಿ ಮಾಡಿದ್ದಾರೆ..
ಇದೆ ಸಮಯದಲ್ಲಿ ಕಾರ್ಯಕ್ರಮದ ನಿರೂಪಕಿ ರಿಷಬ್ ಶೆಟ್ಟಿ ಭಾಷಾ ಪ್ರೇಮಕ್ಕೆ ತಲೆದೊಗಿ ಕನ್ನಡಲ್ಲೇ ಬರೆಯಲು ತಿಳಿಸಿ ಮತ್ತೆ ಅದನ್ನು ಇಂಗ್ಲಿಷ್ ಅನುವಾದ ಮಾಡಿಕೊಂಡರು .
ಕಾಯಕವೇ ಕೈಲಾಸ ಅಂದರೆ ವರ್ಕ್ ಈಸ್ ವರ್ಶಿಪ್ ಅಂದಾಗ ನೆರೆದ ಜನ ಚಪ್ಪಾಳೆಯ ಮೂಲಕ ಶೆಟ್ಟರನ್ನ ಪ್ರಶಂಸಿದರು . ಇದಕ್ಕೂ ಮೊದಲು ನಿರೂಪಕಿ ದಕ್ಷಿಣ ಭಾರತದ ನಟನೊಬ್ಬ ಹಿಂದಿಯಲ್ಲಿ ಮಾತಾಡಿ ಹಿಂದಿ ಭಾಷಿಕರ ಮನ ಗೆದ್ದದ್ದು ಮುಕ್ತ ಕಂಠದಿಂದ ಕೊಂಡಾಡಿದರು .
What’s 2023 agenda for @shetty_rishab? Here’s what he wrote.#AgendaAajtak22 #entertainment #Kantara @swetasinghat pic.twitter.com/6GGO0TOU9M
— IndiaToday (@IndiaToday) December 10, 2022