Duniya Vijay – Panipuri Kitty : ರೀ ಓಪನ್ ಆದ 2018 ರ ಗಲಾಟೆ ಕೇಸ್
2018 ರಲ್ಲಿ ಪಾನಿಪುರಿ ಕಿಟ್ಟಿ ಟೀಂ ಹಾಗೂ ನಟ ದುನಿಯಾ ವಿಜಯ್ ಟೀಂ ನಡುವೆ ನಡೆದಿದ್ದ ಗಲಾಟೆ ಪ್ರಕರಣ ಇದೀಗ ಮರುಜೀವ ಪಡೆದುಕೊಂಡಿದೆ.. ಈ ಸಂಬಂಧ ಇದೀಗ ಪಾನಿಪುರಿ ಕಿಟ್ಟಿ ಮೇಲೆ FIR ದಾಖಲಾಗಿದೆ.
ನಟ ದುನಿಯಾ ವಿಜಯ್ ದಾರು ದಾಲಿಸಿದ ನಂತರ 2018 ರ ಪ್ರಕರಣ ಮತ್ತೆ ರೀ ಓಪನ್ ಆದಂತಾಗಿದೆ.. ಹೈಕೋರ್ಟ್ ಸೂಚನೆ ಮೇರೆಗೆ FIR ದಾಖಲಾಗಿದೆ.
ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ FIR ದಾಖಲು ಮಾಡಲಾಗಿದೆ..
2018 ರಲ್ಲಿ ವಸಂತ ನಗರ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ದೇಹದಾರ್ಡ್ಯ ಸ್ಪರ್ಧೆ ವೇಳೆ ಗಲಾಟೆಯಾಗಿತ್ತು..
ಅಲ್ಲಿ ಪಾನಿಪುರಿ ಕಿಟ್ಟಿ ಟೀಂ ದುನಿಯಾ ವಿಜಯ್ ಟೀಂ ಗೂ ಗಲಾಟೆ ನಡೆದಿತ್ತು.. ಅಂದು ಮಾರುತಿ ಗೌಡ ಸ್ಪರ್ಧೆ ಮಾಡಿದ್ದರು.
ಮಾರುತಿ ಗೌಡ ಪಾನಿಪುರಿ ಕಿಡ್ಟಿಯ ಸಹೋದರನಾಗಿದ್ದು , ಗಲಾಟೆ ನಂತರ ಮಾರುತಿಗೌಡನನ್ನು ವಿಜಯ್ ಕಾರಲ್ಲಿ ಕರೆದೊಯ್ದಿದ್ದರು.
ಕಾರಿನಲ್ಲಿ ಮಾರುತಿಗೆ ವಿಜಯ್ ಟೀಂ ಹಿಗ್ಗಮುಗ್ಗ ಥಳಿಸಿದ್ದರು ಎನ್ನಲಾಗಿತ್ತು.
ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ವಾಪಸ್ ಕರೆತಂದಿದ್ದರು ಎನ್ನಲಾಗಿತ್ತು..
ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ರು.
ನಂತರ ಎರಡೂ ಕಡೆ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು.
ನನ್ನ ಮಗ ಸಾಮ್ರಾಟ್ ನಿಗೆ ಬೈದು ಬೆದರಿಕೆ ಹಾಕಿದ್ರು ಎಂದು ವಿಜಯ್ ದೂರು ನೀಡಿದ್ರು.
ವಿಜಯ್ ಮೇಲೆ 307 ಕೇಸ್ ಪಾನಿಪುರಿ ಕಿಟ್ಟಿ ನೀಡಿದ್ರು.
ಸದ್ಯ ವಿಜಯ್ ಮೇಲಿರುವ ಕೇಸ್ ಕೋರ್ಟ್ನಲ್ಲಿ ನಡೀತಾ ಇದೆ.
ಪಾನಿಪುರಿ ಕಿಟ್ಟಿ ಮೇಲೆ ನೀಡಿದ್ದ ದೂರು ಕ್ಲೋಸ್ ಮಾಡಲಾಗಿತ್ತು.
ಸದ್ಯ ಇನ್ನೊಮ್ಮೆ ಕೇಸ್ ಮಾಡಿ,ತನಿಖೆ ನಡೆಸಲು ಕೋರ್ಟ್ ಸೂಚನೆ ನೀಡಿರುವ ಮೇರೆಗೆ FIR ದಾಖಲಾಗಿದೆ..
ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ..
Duniya Vijay – Panipuri Kitty fight case