Sandalwood : ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್
ಚಿತ್ರರಂಗದಲ್ಲಿ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತದೆ. ಹೊಸತನ, ಹೊಸ ಪ್ರಯೋಗದ ಜೊತೆಗೆ ಅಗಾಧ ಸಿನಿಮಾ ಪ್ರೀತಿಯಿಟ್ಟುಕೊಂಡ ಹಲವು ತಂಡಗಳು ಗಾಂದೀನಗರಕ್ಕೆ ಎಂಟ್ರಿ ಕೊಡುತ್ತಾರೆ. ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಾರೆ. ಅಂತಹದ್ದೇ ಹೊಸತನ, ಸಿನಿಮಾ ಪ್ರೀತಿಯಿರುವ ಚಿತ್ರತಂಡವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಇದೀಗ ಫಸ್ಟ್ ಲುಕ್ ಪೋಸ್ಟರ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.
ಆ ಚಿತ್ರದ ಹೆಸರೇ ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’. ಈ ರೀತಿಯ ವಿಭಿನ್ನ ಶೀರ್ಷಿಕೆಯ ಸಿನೆಮಾ ತನ್ನ ಪೋಸ್ಟರ್ ಮತ್ತು ಟೈಟಲ್ ಬಿಡುಗಡೆ ಮಾಡಿದೆ, ಎಲ್ಲಿಯ ಸೀತಾ..!? ಎಲ್ಲಿಯಾ ಕೃಷ್ಣ..!? ಯಾವುದು ಆ ಮನೆ!?, ಏನಿದರ ಮರ್ಮ!? ಎಂಬಂತೆ ಕುತೂಹಲಕಾರಿಯಾಗಿದೆ, ಕಾಮಿಡಿ ಥ್ರಿಲ್ಲರ್ ಡ್ರಾಮಾ ಹೊಂದಿರುವ ಈ ಸಿನಿಮಾವನ್ನು ಈಗಾಗಲೇ ಸಾಕಷ್ಟು ಸಿನಿಮಾಗಳಿಗೆ ಸಂಭಾಷಣೆ ಸಾಹಿತ್ಯ ಬರೆದಿರುವ ಅಭಿನಂದನ್ ದೇಶ್ ಪ್ರಿಯ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ವಿನಯ್ ಯುವರಾಜ್, ಮನೋಜ್ ಪುತ್ತೂರು, ರಕ್ಷಿತಾ ಅಭಿನಯಿಸಿದ್ದಾರೆ, ಅದಲ್ಲದೆ ಈ ಚಿತ್ರದಲ್ಲಿ ನವೀಂದ್ರ, ದತ್ತಣ್ಣ, ಮನ್ ದೀಪ್ ರಾಯ್, ಮಿಮಿಕ್ರಿ ಗೋಪಿ, ಅನಿಲ್ ಸಿದ್ದು, ಪ್ರಶಾಂತ್.ವೈ.ಎನ್, ರವಿ ಶಂಕರ್ ನಾಗ್, ಕೂಡ ಅಭಿನಯಿಸಿದ್ದಾರೆ.
ಈ ಚಿತ್ರ ಅಭಿನಂದನ್ ದೇಶ್ ಪ್ರಿಯ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ. ಈಗಾಗಲೇ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ.
ಮಹಾನ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಪ್ರತೀತ್ ಅಕ್ಕಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಷ್ಣು ಪ್ರಸಾದ್, ವಿಶ್ವ ಪಾಟೀಲ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಸಿನಿಮಾವನ್ನು ಬೆಂಗಳೂರು, ಸಕಲೇಶಪುರ, ಮಡಿಕೇರಿ, ಹೊನ್ನಾವರ, ಸುತ್ತಮುತ್ತ ಚಿತ್ರೀಕರಿಸಲಾಗಿದೆ. ರಾಘವೇಂದ್ರ. ವಿ ಸಂಗೀತ ನಿರ್ದೇಶನ, ಚೇತನ್ ರಾವ್ ಹಿನ್ನೆಲೆ ಸಂಗೀತ, ಉಜ್ವಲ್ ಚಂದ್ರ ಸಂಕಲನ, ಚಂದ್ರು ಬಂಡೆ ಸಾಹಸ ಚಿತ್ರಕ್ಕಿದೆ. ಫಸ್ಟ್ ಲುಕ್ ಮೂಲಕ ಸಿನಿಮಾ ಪ್ರಚಾರ ಆರಂಭಿಸಿರುವ ಚಿತ್ರತಂಡ ಇನ್ಮುಂದೆ ಒಂದೊಂದೇ ಸ್ಯಾಂಪಲ್ ಗಳ ಮೂಲಕ ಪ್ರೇಕ್ಷಕರ ಮನ ಸೆಳೆಯಲು ತಯಾರಿ ಮಾಡಿಕೊಂಡಿದೆ.