Jailer : ರಜನಿಕಾಂತ್ ಶಿವಣ್ಣ ಜೊತೆಗೆ ಮಲಯಾಳಂ ಸ್ಟಾರ್ ನಟ ಸೇರ್ಪಡೆ..!!
ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂಬರುವ ಸಿನಿಮಾ ಜೈಲರ್.. ಈ ಸಿನಿಮಾದಲ್ಲಿ ಸ್ಯಾಮಡಲ್ ವುಡ್ ನ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.. ಈ ನಡುವೆ ಮತ್ತೊಂದು ಸೆನ್ಷೇನಲ್ ಅಪ್ ಡೇಟ್ ಸಿಕ್ಕಿದೆ..
ಅದೇನೆಂದ್ರೆ ಈ ಸಿನಿಮಾದಲ್ಲಿ ತಲೈವಾ ಜೊತೆಗೆ ಮಾಲಿವುಡ್ ನ ಸ್ಟಾರ್ ನಟ ಮೋಹನ್ ಲಾಲ್ ಅವರು ಕೂಡ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ..
ಇದು ರಜನಿಕಾಂತ್ ನಟನೆಯ 169ನೇ ಸಿನಿಮಾ..
ಸಿನಿಮಾಗೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.. ಈ ಸಿನಿಮಾದಲ್ಲಿ ಶಿವಣ್ಣ ಅತಿಥಿ ಪಾತ್ರದಲ್ಲಿ ನಟಿಸಿದ್ದು , ತಮ್ಮ ಭಾಗದ ಶೂಟಿಂಗ್ ಕೂಡ ಮುಗಿಸಿದ್ದಾರೆ.. ಇದೀಗ ಈ ಸಿನಿಮಾಗೆ ಮತ್ತೋರ್ವ ಸ್ಟಾರ್ ನಟನ ಎಂಟ್ರಿಯಾಗಲಿದೆ.. ನಟ ಮೋಹನ್ ಲಾಲ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.
ಮೋಹನ್ ಲಾಲ್ ಅವರು ಈಗಾಗಲೇ ಹೈದರಾಬಾದ್ನಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಈ ಚಿತ್ರದ ಮೋಹನ್ ಲಾಲ್ ಅವರ ಲುಕ್ ಕೂಡ ರಿವೀಲ್ ಆಗಿದೆ. ನಟನ ಲುಕ್ ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಏಪ್ರಿಲ್ 14ಕ್ಕೆ ಜೈಲರ್ ರಿಲೀಸ್ ಆಗಲಿದೆ.. ದಕ್ಷಿಣ ಭಾರತದ ಮೂವರು ಸ್ಟಾರ್ ನಟರು ಸಿನಿಮಾದಲ್ಲಿರುವ ಕಾರಣ ನಿರೀಕ್ಷೆ ಮೂರು ಪಟ್ಟು ಹೆಚ್ಚಾಗಿದೆ..
Jailer , mohanlal to join rajanikanth , shivarajkumar , cinibazaar