Kantara 2 : ಕಾಂತಾರ ಪ್ರೀಕ್ವೆಲ್ ಶೂಟಿಂಗ್ ಯಾವಾಗ , ರಿಷಬ್ ನೀಡಿದ ಸುಳಿವೇನು..??
ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಒಟಿಟಿಯಲ್ಲಿ ಅಬ್ಬರಕಿಸುತ್ತಾ ಇರುವ ಕಾಂತಾರ ಸಿನಿಮಾ ಆಸ್ಕರ್ ರೇಸ್ ನಲ್ಲಿದ್ದು , ಸಿನಿಮಾ ನಿರ್ದೇಶಿಸಿ ‘ಕಾಡುಬೆಟ್ಟು ಶಿವ’ನಾಗಿ ಅದ್ಭುತ ನಟನೆಯ ಮೂಲಕ ಮಿಂಚಿದ್ದ ರಿಷಬ್ ಇತ್ತೀಚೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೂ ಭಾಜನರಾಗಿದ್ದಾರೆ..
‘ಅತ್ಯಂತ ಭರವಸೆಯ ನಟ’ ಪ್ರಶಸ್ತಿ ಅವರಿಗೆ ಒಲಿದಿದೆ..
ಇತ್ತ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್ ನಲ್ಲಿ ಬ್ಯುಸಿಯಾಗಿರೋವಾಗ್ಲೇ ಈ ಸಿನಿಮಾ ಅದ್ಯಾವಾ ಬರಲಿದೆ , ಶೂಟಿಂಗ್ ಯಾವಾಗ ಶುರುವಾಗಲಿದೆ ಎಂಬುದರ ಬಗ್ಗೆ ರಿಷಬ್ ಶೆಟ್ಟಿ ಸುಳಿವು ಬಿಟ್ಟುಕೊಟ್ಟಿದ್ದಾರೆ..
ಮುಂಬೈ ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ರಿಷಬ್ ಹಿಂದಿ ಸಿನಿಮಾಗೆ ಕೊಟ್ಟ ಪ್ರಶಸ್ತಿ ಇದಾಗಿದೆ. ಕನ್ನಡ ಸಿನಿಮಾಗೆ ಅಲ್ಲ. ಪ್ರಶಸ್ತಿ ಸಿಕ್ಕಿದ್ದು ತುಂಬಾ ಖುಷಿ ಆಗಿದೆ.
ಜವಾಬ್ದಾರಿ ಹೆಚ್ಚು ಆಯ್ತು ಅನ್ನಿಸುತ್ತೆ. ಕನ್ನಡ ಸಿನಿಮಾಗಳ ಬಗ್ಗೆ ವಿಶೇಷ ಗೌರವ ಬರುತ್ತಾ ಇದೆ. ನಮ್ಮ ಟ್ರಡೀಷನ್ ನಲ್ಲೇ ಹೋಗಿದ್ದೆ. ಅಲ್ಲಿದ್ದವರೆಲ್ಲಾ ಗುರುತಿಸಿದ್ರು ಎಂದು ಹೇಳಿದ್ದಾರೆ.
ಬಳಿಕ ಕಾಂತಾರ 2 ಬಗ್ಗೆ ಹಿಂಟ್ ಕೊಟ್ಟಿದ್ದು , ಮಾರ್ಚ್ನಿಂದೇ ಕಾಂತಾರ 2 ಪ್ರಾರಂಭವಾಗಲಿದೆ ಎಂದಿದ್ದಾರೆ..
Kantara 2 , rishabh shetty gives hint about kantara 2