Kantara : ಕಾಂತಾರ 2 ನಲ್ಲಿ ಊರ್ವಶಿ ನಟನೆ – ರಿಷಬ್ ಹೇಳಿದ್ದೇನು..??
ಕಾಂತಾರ ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ..
ಕಾಂತಾರ 2 ನಲ್ಲಿ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಬ್ಯುಸಿಯಾಗಿದ್ದಾರೆ..
ಕಾಂತರದ ಪ್ರೀಕ್ವೆಲ್ ಸಿನಿಮಾ ಕಥೆ ಹೆಣೆಯುವಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂತಾರದ ಮುಂದಿನ ಭಾಗದಲ್ಲಿ ಯಾರು ಯಾರು ನಟಿಸಲಿದ್ದಾರೆ ಎಂಬ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿವೆ..
ಒಂದೆಡೆ ಸೂಪರ್ ಸ್ಟಾರ್ ರಜನಿಕಾಂತ್ ಇನ್ನೊಂದೆಡೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸಹ ೀ ಸಿನಿಮಾದಲ್ಲಿ ಕಾಣಿಸಿಕೊಳ್ತಾರಾ ಎಂಬ ಊಹಾಪೋಹಗಳ ನಡುವೆಯೇ ಇದೀಗ ರಿಷಬ್ ಶೆಟ್ಟಿ ಊರ್ವಶಿ ನಟಿಯ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ..
ಕಾಂತಾರ 2 ಚಿತ್ರದಲ್ಲಿ ಊರ್ವಶೀ ನಟಿಸಲಿದ್ದಾರೆ ಎನ್ನವುದಕ್ಕೆ ಕಾರಣವಾಗಿದ್ದು ರಿಷಬ್ ಶೆಟ್ಟಿ ಜೊತೆ ನಟಿ ಊರ್ವಶಿ ರೌಟೇಲ ಜೊತೆ ತೆಗೆಸಿಕೊಂಡ ಪೋಟೋದಿಂದ. ರಿಷಬ್ ಜೊತೆ ನಿಂತು ಕಾಂತಾರ 2 ಲೋಡಿಂಗ್ ಎಂದು ಕ್ಯಾಪ್ಶನ್ ನೀಡಿದ್ದರು.
ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ರಿಷಬ್ ಮುಂದಿನ ಚಿತ್ರದಲ್ಲಿನಟಿಸಲಿದ್ದಾರೆ ಎನ್ನುವ ಗಾಳಿ ಸುದ್ದಿಗೆ ಕಾರಣವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ರಿಷಬ್ ಶೆಟ್ಟಿಗೆ ಪ್ರಶ್ನೆಗಳನ್ನ ಕೇಳಲಾಗಿದೆ. ಅದಕ್ಕೆ ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆಯಲು ಮುಂಬೈಗೆ ತೆರಳಿದ್ದ ವೇಳೆ ಸಿನಿ ವರದಿಗಾರರು ರಿಷಬ್ ಅವರಿಗೆ ಕಾಂತಾರ 2 ನಲ್ಲಿ ಊರ್ವಶಿ ಹೆಸರು ಕೇಳಿಬರುತ್ತಿರುವ ಕುರಿತು ಪ್ರಶ್ನೆ ಮಾಡಿದ್ದಾರೆ.
ಅದಕ್ಕೆ ರಿಷಬ್ ನಮ್ಮ ಸೆಲ್ಫಿ ನೋಡಿ ಈ ರೀತಿಯ ಮಾತುಗಳು ಬರುತ್ತಿವೆ. ಆ ರೀತಿ ಇಲ್ಲ. ಅವರು ನಟಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ..
ಜೊತೆಗೆ ಕಾಂತಾರ 2 ಕಥೆ ಬರೆಯುತ್ತಿದ್ದೇನೆ. ಶೀಘ್ರವೇ ಘೋಷಣೆ ಮಾಡುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆದ್ರೆ ರಜನಿಕಾಂತ್ ಈ ಸಿನಿಮಾದಲ್ಲಿ ನಟಿಸೋದು ಬಹುತೇಕ ಪಕ್ಕ ಎನ್ನುತ್ತಿವೆ ಮೂಲಗಳು..
Kantara , urvashi in kantara 2..?? rishabh clarification