Drishyam : ಹಾಲಿವುಡ್ ಗೂ ರೀಮೇಕ್ ಆಗಲಿದೆ ಮಾಲಿವುಡ್ ನ ಹಿಟ್ ಸಿನಿಮಾ
ಮಲಯಾಳಂನಲ್ಲಿ ಸೂಪರ್ ಹಿಟ್ ಆಗಿದ್ದ ಮೋಹನ್ ಲಾಲ್ ನಟನೆಯ ದೃಶ್ಯಂ ಸಿನಿಮಾದ ಸೀರೀಸ್ ಕನ್ನಡದಲ್ಲೂ ಕೂಡ ಅಷ್ಟೇ ಯಶಸ್ಸು ಕಂಡಿದೆ..
ಕನ್ನಡದಲ್ಲಿ ರವಿಚಂದ್ರನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.. ಹಾಗೆಯೇ ತೆಲುಗು , ಹಿಂದಿಯಲ್ಲೂ ಸಿನಿಮಾ ರೀಮೇಕ್ ಆಗಿ ಸೂಪರ್ ಹಿಟ್ ಆಗಿದೆ.
ಹೀಗೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಜೊತೆಗೆ ಹಿಂದಿಗೂ ರೀಮೇಕ್ ಆದ ಈ ಸಿನಿಮಾ ಇದೀಗ ಹಾಲಿವುಡ್ ನಲ್ಲೂ ಆಗುತ್ತಿದೆ.
ಇತ್ತೀಚೆಗೆ ಪನೊರಮ ಸ್ಟುಡಿಯೋಸ್ ಇಂಟರ್ನ್ಯಾಷನಲ್ ವಿದೇಶಿ ಭಾಷೆಗಳ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದೆ.
ಹೀಗಾಗಿ ಹಾಲಿವುಡ್ ನಲ್ಲೂ ದೃಶ್ಯಂ ಸೀರೀಸ್ ನಿರ್ಮಾಣ ಆಗಲಿದೆ ಎಂದು ಹೇಳಲಾಗುತ್ತಿದೆ..
Drishyam will also be remaked in hollywood