ಮೆಗಾಸ್ಟಾರ್ ಚಿರಂಜೀವಿ ಸೊಸೆಯ ಅದ್ಧೂರಿ ಸೀಮಂತ ಸಂಭ್ರಮ..ರಾಮ್ ಚರಣ್ ಪತ್ನಿ ಉಪಾಸನಾ ಸೀಮಂತ ಸಂಭ್ರಮದಲ್ಲಿ ಅಲ್ಲು ಅರ್ಜುನ್-ಸಾನಿಯಾ ಮಿರ್ಜಾ ಹಂಗಾಮ
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲೀಗ ಸಂತಸ ಮನೆ ಮಾಡಿದೆ. ಬರೋಬ್ಬರಿ 10 ವರ್ಷದ ಬಳಿಕ ಚಿರು ಸುಪುತ್ರ ರಾಮ್ ಚರಣ್ ಹಾಗೂ ಪತ್ನಿ ಉಪಾಸನಾ ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈ ಖುಷಿ ವಿಚಾರದ ಜೊತೆಗೆ ಆಸ್ಕರ್ ಗೆದ್ದಿರುವ ಸಡಗರ ಕೂಡ ರಾಮ್ ಮುಖದಲ್ಲಿದೆ. ಸದಾ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವ ಮೆಗಾಸ್ಟಾರ್ ಪುತ್ರ ಪತ್ನಿಯನ್ನು ಬಹಳ ಪ್ರೀತಿಯಿಂದ ಹಾರೈಕೆ ಮಾಡುತ್ತಿದ್ದಾರೆ. 3 ವಾರದ ಹಿಂದಷ್ಟೇ ದುಬೈನಲ್ಲಿ ಅದ್ಧೂರಿಯಾಗಿ ಉಪಾಸನಾ ಶ್ರೀಮಂತ ಸಂಭ್ರಮ ನೆರವೇರಿಸಲಾಗಿತ್ತು. ಅದರ ಬೆನ್ನಲ್ಲೇ ಹೈದ್ರಾಬಾದ್ ರಾಮ್ ಚರಣ್ ನಿವಾಸದಲ್ಲಿ ಮತ್ತೊಂದು ಸೀಮಂತ ಕಾರ್ಯಕ್ರಮ ನಡೆದಿದೆ.
ಹೈದ್ರಾಬಾದ್ ನಲ್ಲಿ ನಡೆದ ಅದ್ಧೂರಿ ಬೇಬಿ ಶವರ್ ಕಾರ್ಯಕ್ರಮದಲ್ಲಿ ರಾಮ್ ಉಪಾಸನಾ ಸುಂದರವಾಗಿ ಕಂಗೊಳಿಸಿದ್ದಾರೆ. ಈ ಪಾರ್ಟಿಯಲ್ಲಿ ಪಿಂಕಿ ರೆಡ್ಡಿ, ಸಾನಿಯಾ ಮಿರ್ಜಾ, ಕನಿಕಾ ಕಪೂರ್, ಅಲ್ಲು ಅರ್ಜುನ್ ಮತ್ತು ಅವರ ಕುಟುಂಬ ಸದಸ್ಯರು, ಚಿರಂಜೀವಿ ಮತ್ತು ಸುರೇಖಾ ಕೊನಿಡೇಲ, ಸಹೋದರಿಯರಾದ ಸುಶ್ಮಿತಾ ಮತ್ತು ಶ್ರೀಜಾ, ಉಪಾಸನಾ ಅವರ ತಾಯಿ, ಶ್ರೀಮತಿ ಶೋಬನಾ ಕಾಮಿನೇನಿ, ಸಂಗೀತಾ ರೆಡ್ಡಿ ಸೇರಿದಂತೆ ಅವರ ಆಪ್ತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.