ನಟ ಪ್ರಭಾಸ್ ಅಭಿನಯದ ಕಲ್ಕಿ 2898 ಎಡಿ’ ಸಿನಿಮಾಗೆ ಭಾರೀ ರೆಸ್ಪಾನ್ಸ್ ಸಿಗುತ್ತಿದೆ. ಈ ಚಿತ್ರ ವಾರಾಂತ್ಯದಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ.
ಚಿತ್ರವು ಬರೋಬ್ಬರಿ 1 ಸಾವಿರ ಕೋಟಿ ರೂ. ಗಳಿಕೆಯ ಸಮೀಪಕ್ಕೆ ಬಂದು ನಿಂತಿದೆ. ಸೋಮವಾರ ವಿಶ್ವಾದ್ಯಂತ 84 ಕೋಟಿ ರೂಪಾಯಿ ಬಾಚಿಕೊಂಡಿದೆ. ವಾರದ ದಿನ ಇಷ್ಟೊಂದು ಗಳಿಕೆ ಮಾಡಿದ್ದು ಅನೇಕರಿಗೆ ಆಶ್ಚರ್ಯ ಮೂಡಿಸಿದೆ. ಹೀಗಾಗಿ ಇಲ್ಲಿಯವರೆಗೆ ಸಿನಿಮಾದ ಒಟ್ಟೂ ಗಳಿಕೆ 635 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಕಲ್ಕಿ ಅನಾಯಾಸವಾಗಿ 1000 ಕೋಟಿ ರೂಪಾಯಿ ತಲುಪಲಿದೆ ಎನ್ನಲಾಗುತ್ತಿದೆ.
ಕಲ್ಕಿ 2898 ಎಡಿ ಚಿತ್ರವು ಸೋಮವಾರ ಭಾರತದಲ್ಲಿ 34.6 ಕೋಟಿ ರೂಪಾಯಿ ಬಾಚಿಕೊಂಡಿದೆ. ವಿಶ್ವ ಮಟ್ಟದಲ್ಲಿ 45-50 ಕೋಟಿ ರೂಪಾಯಿ ಬಾಚಿದೆ. ಈ ಮೂಲಕ ಒಟ್ಟೂ ಗಳಿಕೆ 635 ಕೋಟಿ ರೂಪಾಯಿ ಗುಡ್ಡೆ ಹಾಕಿಕೊಂಡಿದೆ. ‘ಕಲ್ಕಿ 2898 ಎಡಿ’ ಚಿತ್ರ ಜೂನ್ 27ರಂದು ಬಿಡುಗಡೆ ಕಂಡಿದೆ.
ಕಲ್ಕಿ 2898 ಎಡಿ’ ಚಿತ್ರ ಮೊದಲ ದಿನವೇ ವಿಶ್ವಾದ್ಯಂತ 191 ಕೋಟಿ ರೂಪಾಯಿ ಗಳಿಸಿತ್ತು. ಈ ಮೂಲಕ ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ‘ಕೆಜಿಎಫ್ 2’, ‘ಸಲಾರ್’, ‘ಲಿಯೋ’ ಮೊದಲಾದ ಚಿತ್ರಗಳನ್ನು ಹಿಂದಿಕ್ಕಿತ್ತು. ಸದ್ಯ ಕಲ್ಕಿ ಮೊದಲ ದಿನದ ಗಳಿಕೆಯಲ್ಲಿ ದಾಖಲೆ ಬರೆದಿದೆ.
ಈ ಚಿತ್ರದಲ್ಲಿ ಚಿತ್ರದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಸೇರಿದಂತೆ ಹಲವರು ನಟಿಸಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರಕ್ಕೆ ಅಶ್ವಿನಿ ದತ್ ಬಂಡವಾಳ ಹಾಕಿದ್ದಾರೆ.