ಟಾಳಿವುಡ್ ನ ಕ್ಯೂಟ್ ಕಪಲ್ ರಾಮಚರಣ್ ಹಾಗೂ ಉಪಾಸನಾ ಮದುವೆಯಾಗಿ 10 ವರ್ಷಗಳೇ ಕಳೆದಿದೆ… ಆದ್ರೆ ಈವರೆಗೂ ಈ ದಂಪತಿಗೆ ಮಕ್ಕಳಿಲ್ಲ.. ಹೀಗಾಗಿ ಇವರಿಬ್ಬಗರೂ ಯಾವಾಗ ಮಗು ಹೊಂದುತ್ತಾರೆ ಎಂಬ ಪ್ರಶ್ನೆಗಳನ್ನ ಆಗಾಗ ಹಲವರು ಕೇಳ್ತಾಯಿರುತ್ತಾರೆ.. ಇದೀಗ ರಾಮ್ ಚರಣ್ ದಂಪತಿ ಮಕ್ಕಳನ್ನು ಹೊಂದುವ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಹೌದು..! ಸದ್ಯ ಟಾಳಿವುಡ್ ನ ಸ್ಟಾರ್ ನಟ ರಾಮ್ ಚರಣ್ RRR ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾಋಎ.. ಪ್ರಸ್ತುತ ಶಂಕರ್ ಜೊತೆಗೆ 15 ನೇ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ.. ಅವರ ಪತ್ನಿ ಉಪಾಸನಾ ಕೂಡ ಬ್ಯುಸಿನೆಸ್ ಮಾಡ್ತಾ , ನಿರೂಪಣೆ ಮೂಲಕವೂ ಗುರುತಿಸಿಕೊಂಡಿದ್ದಾರೆ..
ಅಷ್ಟೇ ಅಲ್ದೇ ಪತ್ನಿ ಉಪಾಸನಾ ಸಾಮಾಜಿಕ ಕಾರ್ಯಗಳ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಾರೆ.. ಇತ್ತೀಚೆಗೆ ಮಕ್ಕಳ ಬಗ್ಗೆ ಪ್ರಶ್ನೆ ಬಂದಾಗ ರಾಮ್ ಚರಣ್ ಅವರು ಮೆಗಾಸ್ಟಾರ್ ಪುತ್ರನಾಗಿ ನನ್ನ ಮೇಲು ಸಾಕಷ್ಟು ಜವಾಬ್ದಾರಿಯಿದೆ. ತನ್ನ ಅಭಿಮಾನಿಗಳಿಗೆ ನನ್ನ ಸಿನಿಮಾಗಳಿಂದ ರಂಜಿಸೋದೇ ನನ್ನ ಸದ್ಯದ ಗುರಿ ಅಂತಾ ತಿಳಿಸಿದ್ದಾರೆ. ಈ ಹಿಂದೆ ಉಪಾಸನಾ ಸದ್ಗುರು ಅವರನ್ನ ಭೇಟಿ ಮಾಡಿದ್ದ ವೇಳೆ ಜನಸಂಖ್ಯೆ ನಿಯಂತ್ರಣಕ್ಕೆ ಮಕ್ಕಳು ಬೇಡ ಅಂದಿದ್ದರು. ಒಟ್ನಲ್ಲಿ ಇಬ್ಬರೂ ಸದ್ಯಕ್ಕೆ ಮಕ್ಕಳು ಬೇಡವೆಂದು ನಿರ್ಧಾರ ಮಾಡಿದ್ದಾರೆ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗಿದೆ…