ಹಿರಿಯ ಮೇಕಪ್ ಕಲಾವಿದ ಎಂ.ಎಸ್. ಕೇಶವಣ್ಣ ನಿಧನ…
ರಾಜ್ ಕುಮಾರ್, ರಜನಿಕಾಂತ್, ನಿಂದ ಹಿಡಿದು ಪುನೀತ್ ರಾಜ್ ಕುಮಾರ್ ವರೆಗೆ ಮೇಕಪ್ ಕಲಾವಿದರಾಗಿ ದುಡಿದಿದ್ದ ಸ್ಯಾಂಡಲ್ವುಡ್ ಹಿರಿಯ ಮೇಕಪ್ ಮ್ಯಾನ್ ಎಂ.ಎಸ್. ಕೇಶವಣ್ಣ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಕೇಶವಣ್ಣ ಅವರನ್ನ ಕಳೆದ ಎರಡು ದಿನಗಳಿಂದ ಮೈಸೂರು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಇಂದು ಮೈಸೂರಿನಲ್ಲಿ ಕೇಶವಣ್ಣ ಅವರ ಅಂತ್ಯ ನೆರೆವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಅಂದಿನ ಸೂಪರ್ ಹಿಟ್ ಸಿನಿಮಾ ನಾ ನಿನ್ನ ಬಿಡಲಾರೆ ಚಿತ್ರದಲ್ಲಿ ನಟ ಅನಂತ್ ನಾಗ್ ಅವರ ದೆವ್ವದ ಮೇಕಪ್ ನೋಡಿ ಎಷ್ಟೋ ಜನ ಹೆದರಿದ್ದರು. ಆ ಚಿತ್ರದಲ್ಲಿ ಅನಂತ್ ನಾಗ್ ಗೆ ಮೇಕಪ್ ಮಾಡಿದ್ದು ಇದೇ ಕೇಶವಣ್ಣ.
25-30 ವರ್ಷಗಳ ಕಾಲ ರಾಜ್ಕುಮಾರ್ ಅವರ ಕಂಪನಿಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಸೇವೆ ಸಲ್ಲಿಸಿದ ಕೇಶವಣ್ಣ ಅವರು, ಮೊದಲ ಬಾರಿಗೆ ಹಾಸ್ಯ ಕಲಾವಿದ ನರಸಿಂಹ ರಾಜು ಅವಿಗೆ ಮೇಕಪ್ ಮಾಡುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ರಾಜ್ಕುಮಾರ್, ರಜನಿಕಾಂತ್, ಅಂಬರೀಷ್, ಪುನೀತ್ ರಾಜ್ ಕುಮಾರ್, ಅನಂತ್ ನಾಗ್, ಶಿವರಾಜ್ ಕುಮಾರ್ ಸೇರಿದಂತೆ ಹಲವಾರು ಸ್ಟಾರ್ ನಟರಿಗೆ ಮೇಕಪ್ ಮಾಡಿದ್ದಾರೆ. ಅಲ್ಲದೇ ಪೃಥ್ವಿ ರಾಜ್ ಕಪೂರ್, ಬಾಲಣ್ಣ, ಉದಯ ಕುಮಾರ್, ವಜ್ರಮುನಿ ಸೇರಿದಂತೆ ಅನೇಕ ಕಲಾವಿದರಿಗೆ ಮೇಕಪ್ ಮಾಡಿದ್ದಾರೆ. ಕೊನೆಯದಾಗಿ ಕುರಕ್ಷೇತ್ರ ಸಿನಿಮಾದಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದರು.