ಮಾಲಿವುಡ್ ನಟ ಶರತ್ ಚಂದ್ರನ್ ವಿಧಿವಶರಾಗಿದ್ದು , ಅವರ ಅಕಾಲಿಕ ನಿಧನದ ಸುದ್ದಿ ಸಿನಿಮಾರಂಗಕ್ಕೆ ಆಘಾತವುಂಟುಮಾಡಿದೆ. . 37 ವರ್ಷಕ್ಕೆ ನಟ ಬಾರದ ಲೋಕಕ್ಕೆ ಪಪಯಣ ಬೆಳೆಸಿದ್ದಾರೆ.
ಅಂಗಮಾಲಿ ಡೈರೀಸ್ ಚಿತ್ರದ ಮೂಲಕ ಇವರು ಫೇಮಸ್ ಆಗಿದ್ದರು.. ಶರತ್ ಚಂದ್ರನ್ ಅವರ ನಿಧನಕ್ಕೆ ಅಭಿಮಾನಿಗಳು , ಸಿನಿಮಾರಂಗದ ಕಲಾವಿದರು ಸಂತಾಪ ಸೂಚಿಸುತ್ತಿದ್ದಾರೆ.
ಡಬ್ಬಿಂಗ್ ಆರ್ಟಿಸ್ಟ್ ಆಗಿ ಮತ್ತು ಮಲಯಾಳಂನ ಸಾಕಷ್ಟು ಸಿನಿಮಾಗಳ ಮೂಲಕ ನಟ ಶರತ್ ಚಂದ್ರನ್ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು.
ನಟ ಆ್ಯಂಟನಿ ಅವರು ಶರತ್ ನಿಧನದ ವಿಚಾರವನ್ನ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.