Zee Kannada ದಲ್ಲಿ ಬರುತ್ತಿದೆ The Kashmir Files , ಯಾವಾಗ , ಯಾವ ಸಮಯಕ್ಕೆ..??
ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದ The Kashmir Files ಸಿನಿಮಾ ದೇಶದ ಜನರನ್ನ ಟ್ಟುಉ ಗೂಡಿಸಿತ್ತು.. ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು.. ದಶಕಗಳ ಹಿಂದೆ ಜಿಹಾದಿಗಳಿಂದ ಕ್ರೂರವಾಗಿ ಹಿಂಸಾರಾಕ್ಕೆ ಒಳಗಾಗಿದ್ದ , ಕಾಶ್ಮೀರ ಪಂಡಿತರು ಅನುಭವಿಸಿದಂತಹ ಕಷ್ಟಗಳನ್ನ , ಜಿಹಾದಿಗಳ ಕ್ರೂರತ್ವವನ್ನ , ಹೇಗೆ ಕಾಶ್ಮೀರಿ ಪಂಡಿತರು ತಮ್ಮದೇ ನೆಲವನ್ನ ಬಿಟ್ಟು ವಲಸೆ ಬಂದಿದ್ದರೆಂಬುದನ್ನ ಸಿನಿಮಾದಲ್ಲಿ ತೋರಿಸಲಾಗಿತ್ತು..
ಈ ಸಿನಿಮಾವನ್ನ ಜನರು ಮುಗಿಬಿದ್ದು ವೀಕ್ಷಣೆ ಮಾಡಿದ್ದರು.. ಈ ಸಿನಿಮಾಗೆ ಅನೇಕ ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿಯನ್ನೂ ನೀಡಲಾಗಿತ್ತು.. ನಂತರ ಸಿನಿಮಾ ಒಟಿಟಿಯಲ್ಲೂ ಗೆದ್ದಿತ್ತು.. ಮಿಲಿಯನ್ ಗಟ್ಟಲೆ ವೀವ್ಸ್ ಗಳನ್ನ ಗಳಿಸಿದೆ.. ಇದೀಗ ಸಿನಿಮಾ ಟಿವಿಯಲ್ಲಿ ಯಾವಾಗ ಬರುತ್ತದೆ..
ಅದ್ರಲ್ಲೂ ಸಿನಿಮಾವನ್ನ ಕನ್ನಡದಲ್ಲಿ ನೋಡಬೇಕೆಂದು ಕಾಯ್ತಿರುವ ಜನರಿಗೆ ಇಲ್ಲೊಂದು ಗುಡ್ ನ್ಯೂಸ್ ಸಿಕ್ಕಿದೆ..
ಸಿನಿಮಾ Zee Kannada ದಲ್ಲಿ ಬರುತ್ತಿದೆ.. ಸ್ವಾತಂತ್ರೋತ್ಸವದ ಅಂಗವಾಗಿ ಸಿನಿಮಾ ಆಗಸ್ಟ್ 15 ( Independence Day) ರಂದು ಮಧ್ಯಾಹ್ನ 3 ಗಂಟೆಗೆ ಸಿನಿಮಾ ಪ್ರಸಾರವಾಗಲಿದೆ. ಮೂಲಕ ಚಿತ್ರವನ್ನ ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರಿಗೆ ಮನೆಯಲ್ಲಿ ಕುಟುಂಬದ ಜೊತೆಗೆ ಸಿನಿಮಾ ನೋಡುವ ಅವಕಾಶ ಸಿಗುತ್ತಿದೆ… ಅದ್ರಲ್ಲೂ ಕನ್ನಡದಲ್ಲಿ.. ಈ ಸಿನಿಮಾ ಸುಮಾರು 20 ರಿಂದ 30 ಕೋಟಿ ಬಜೆಟ್ ನಲ್ಲಿ ತಯಾರಾಗಿತ್ತು.. ಆದ್ರೆ ಬಾಕ್ಸ್ ಆಫೀಸ್ ನಲ್ಲಿ 252 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು..
ಅಂದ್ಹಾಗೆ ಬಾಲಿವುಡ್ ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ಮಟ್ಟದ ಲಾಭ ಯಾವೊಂದು ಸಿನಿಮಾ ಕೂಡ ಮಾಡಿಲ್ಲ..