ಸ್ಯಾಂಡಲ್ ವುಡ್ Sandalwood ಸಿನಿಮಾ ಮೂಲಕ ಹಿಟ್ ಆಗಿ ಟಾಲಿವುಡ್ ನಲ್ಲೇ ಬೇರು ಬಿಟ್ಟು , ಬಾಲಿವುಡ್ ನಲ್ಲಿ ಸ್ಟ್ರಗಲ್ ಮಾಡ್ತಿರೋ ರಶ್ಮಿಕಾ ಮಂದಣ್ಣ Rashmika Mandanna ಈಗಾಗಲೇ ಬಾಲಿವುಡ್ ನ 2 ಸಿನಿಮಾಗಳಲ್ಲಿ ನಟಿಸಿ ಆಗಿದೆ.. ಈಗ ರಣಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ.. ಜೊತೆಗೆ ಪುಷ್ಪ 2 , ತಮಿಳಿನಲ್ಲಿ ವಿಜಯ್ ಸಿನಿಮಾದಲ್ಲೂ ಬ್ಯುಸಿಯಿದ್ದಾರೆ..
ಸಿನಿಮಾಗಳಿಗಿಂತ ಟ್ರೋಲ್ ಗಳಿಂದಲೇ ಹೆಚ್ಚು ಸುದ್ದಿಯಲ್ಲಿರೋ ರಶ್ಮಿಕಾ ಲವ್ ಲೈಫ್ ವಿಚಾರವಾಗೂ ಗಾಸಿಪ್ ಆಗ್ತಲೇ ಇರುರತ್ತಾರೆ.. ಅದ್ರಲ್ಲೂ ಗೀತಾ ಗೋವಿಂದಂ ಕೋ ಸ್ಟಾರ್ ವಿಜಯ್ ದೇವರಕೊಂಡ ಅವರ ಜೊತೆಗೆ ಲವ್ವಲ್ಲಿದ್ದಾರೆ ಎಂಬ ಸುದ್ದಿ ಆಗಾಗ ಹರಿದಾಡ್ತಲೇ ಇರುತ್ತೆ.. ಗಾಸಿಪ್ ಗೆ ಪುಷ್ಠಿ ಎಂಬಂತೆ ಇಬ್ಬರೂ ಒಟ್ಟಾಗಿ ಹೋಟೆಲ್ , ಜಿಮ್ ಹೊರಗೆ ಹೀಗೆ ಅಲ್ಲಲ್ಲಿ ಒಟ್ಟಿಗೆ ಕಾಣಿಸಿಕೊಳ್ತಾ ಇರುತ್ತಾರೆ..
ಆದ್ರೆ ಇತ್ತೀಚೆಗೆ ಇವರ ಬಗ್ಗೆ ಮತ್ತೊಂದು ಸುದ್ದಿಯೂ ಹರಿದಾಡಿತ್ತು.. ಅದೇನೆಂದ್ರೆ ಈ ಇಬ್ಬರೂ ಎರೆಡು ವರ್ಷಗಳ ಹಿಂದೆ ಪ್ರೀತಿಯಲ್ಲಿದ್ದದ್ದು ನಿಜವೇ ಆದ್ರೆ ಆನಂತರ ಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ..
ಅಂದ್ಹಾಗೆ ಲೈಗರ್ ಸಿನಿಮಾ ಪ್ರಮೋಷನ್ ನಲ್ಲಿ ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯಾ ಪಾಂಡೆ ಬ್ಯುಸಿಯಾಗಿದ್ದಾರೆ.. ಅಂದ್ಹಾಗೆ ಇದೀಗ ಮತ್ತೊಂದು ಹೊಸ ಲವ್ ಗಾಸಿಪ್ ಹರಿದಾಡುತ್ತಿದೆ.. ಈ ಜೋಡಿಯ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಇದೆ.. ವಿಜಯ್ ದೇವರಕೊಂಡ ರಶ್ಮಿಕಾ ನಂತರ ಈಗ ಅನನ್ಯಾ ಜೊತೆಗೆ ಪ್ರೀತಿಯಲ್ಲಿದ್ದಾರೆ ಎನ್ನಲಾಗ್ತಿದೆ..
ಅಂದ್ಹಾಗೆ ಈ ಇಬ್ಬರೂ ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿ ಸೆಕ್ಸ್ ಹಾಗೂ ಇತರೇ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ರು.. ಅಲ್ದೇ ಅನನ್ಯ ಪಾಂಡೆ ವಿಜಯ್ ರನ್ನ ಸಂಪೂರ್ಣವಾಗಿ ಬೆತ್ತಲಾಗಿ ನೋಡಬೇಕೆಂದಿದ್ದರು ಸಹ.. ಅವರ ಈ ಹೇಳಿಕೆ ಸಾಕಷ್ಟು ವಿವಾದವನ್ನೂ ಹುಟ್ಟುಹಾಕಿತ್ತು.. ಅಲ್ದೇ ಈ ವಿಚಾರವಾಗಿ ರಶ್ಮಿಕಾ ಸಿಟ್ಟಾಗಿದ್ದಾರೆ ಎಂದೂ ಊಹಾಪೋಹ ಹರಿದಾಡಿತ್ತು..