The Kashmir Files : ಇಂದು ಟಿವಿಯಲ್ಲಿ ಬರುತ್ತಿದೆ ದಿ ಕಾಶ್ಮೀರ್ ಫೈಲ್ಸ್..!!
ಇಂದು 75 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಇಡೀ ದೇಶಾದ್ಯಂತ ತ್ರಿವರ್ಣ ಧ್ವಜ ಕಂಗೊಳಿಸುತ್ತಿದೆ.. ಹರ್ ಘರ್ ತಿರಂಗಾ ಅಭಿಯಾನದಡಿ ಮನೆ ಮನೆ ಎದುರು ಸಹ ತ್ರಿವರ್ಣ ದ್ವಜ ರಾರಾಜಿಸುತ್ತಿದೆ..
ಅಂದ್ಹಾಗೆ ಇಂದು ಟಿಯಿ ವಾಹಿನಿಗಳಲ್ಲಿ ದೇಶಭಕ್ತಿ ಕಾರ್ಯಕ್ರಮಗಳು ಸಿನಿಮಾಗಳು ಪ್ರಸಾರವಾಗುತ್ತಿವೆ.. ಹಾಗೆಯೇ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಸಹ ಇಂದು ಪ್ರಸಾರವಾಗುತ್ತಿದೆ.. ಅದೂ ಕೂಡ ಕನ್ನಡದಲ್ಲಿ Zee kannada ವಾಹಿನಿಯಲ್ಲಿ.. ಮನೆ ಮಂದಿಯಲ್ಲ ಕೂತು ಒಟ್ಟಿಗೆ ಸಿನಿಮಾ ವೀಕ್ಷಿಸಬಹುದಾಗಿದೆ..
ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದ The Kashmir Files ಸಿನಿಮಾ ದೇಶದ ಜನರನ್ನ ಒಟ್ಟುಗೂಡಿಸಿತ್ತು..
ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು.. ದಶಕಗಳ ಹಿಂದೆ ಜಿಹಾದಿಗಳಿಂದ ಕ್ರೂರವಾಗಿ ಹಿಂಸಾರಾಕ್ಕೆ ಒಳಗಾಗಿದ್ದ , ಕಾಶ್ಮೀರ ಪಂಡಿತರು ಅನುಭವಿಸಿದಂತಹ ಕಷ್ಟಗಳನ್ನ , ಜಿಹಾದಿಗಳ ಕ್ರೂರತ್ವವನ್ನ , ಹೇಗೆ ಕಾಶ್ಮೀರಿ ಪಂಡಿತರು ತಮ್ಮದೇ ನೆಲವನ್ನ ಬಿಟ್ಟು ವಲಸೆ ಬಂದಿದ್ದರೆಂಬುದನ್ನ ಸಿನಿಮಾದಲ್ಲಿ ತೋರಿಸಲಾಗಿತ್ತು..
ಈ ಸಿನಿಮಾವನ್ನ ಜನರು ಮುಗಿಬಿದ್ದು ವೀಕ್ಷಣೆ ಮಾಡಿದ್ದರು.. ಈ ಸಿನಿಮಾಗೆ ಅನೇಕ ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿಯನ್ನೂ ನೀಡಲಾಗಿತ್ತು.. ನಂತರ ಸಿನಿಮಾ ಒಟಿಟಿಯಲ್ಲೂ ಗೆದ್ದಿತ್ತು.. ಮಿಲಿಯನ್ ಗಟ್ಟಲೆ ವೀವ್ಸ್ ಗಳನ್ನ ಗಳಿಸಿದೆ.. ಇದೀಗ ಸಿನಿಮಾ ಟಿವಿಯಲ್ಲಿ ಯಾವಾಗ ಬರುತ್ತದೆ..
ಮಧ್ಯಾಹ್ನ 3 ಗಂಟೆಗೆ ಸಿನಿಮಾ ಪ್ರಸಾರವಾಗಲಿದೆ. ಮೂಲಕ ಚಿತ್ರವನ್ನ ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರಿಗೆ ಮನೆಯಲ್ಲಿ ಕುಟುಂಬದ ಜೊತೆಗೆ ಸಿನಿಮಾ ನೋಡುವ ಅವಕಾಶ ಸಿಗುತ್ತಿದೆ… ಅದ್ರಲ್ಲೂ ಕನ್ನಡದಲ್ಲಿ.. ಈ ಸಿನಿಮಾ ಸುಮಾರು 20 ರಿಂದ 30 ಕೋಟಿ ಬಜೆಟ್ ನಲ್ಲಿ ತಯಾರಾಗಿತ್ತು.. ಆದ್ರೆ ಬಾಕ್ಸ್ ಆಫೀಸ್ ನಲ್ಲಿ 252 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು..
ಅಂದ್ಹಾಗೆ ಬಾಲಿವುಡ್ ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ಮಟ್ಟದ ಲಾಭ ಯಾವೊಂದು ಸಿನಿಮಾ ಕೂಡ ಮಾಡಿಲ್ಲ..