LM Koushik : ಯುವ ಸಿನಿಮಾ ವಿಮರ್ಶಕ LM ಕೌಶಿಕ್ ನಿಧನ , ಧನುಷ್ , ರಿಷಬ್ , ಯಶ್ ಸೇರಿ ಹಲವರಿಂದ ಸಂತಾಪ
ಯುವ ಸಿನಿಮಾ ವಿಮರ್ಶಕ LM ಕೌಶಿಕ್ 35 ನೇ ವಯಸ್ಸಿನಲ್ಲಿಯೇ ಹಠಾತ್ ನಿಧನ ಹೊಂದಿದ್ದು , ಅನೇಕ ಸ್ಟಾರ್ ಗಳು ಸಂತಾಪ ಸೂಚಿಸುತ್ತಿದ್ದಾರೆ..
ಬಾಕ್ಸ್ ಆಫೀಸ್ ಟ್ರ್ಯಾಕರ್ LM ಕೌಶಿಕ್ ಅವರು ಆಗಸ್ಟ್ 15 ರಂದು ನಿಧನರಾಗಿದ್ದಾರೆ. ಅವರಿಗೆ ತಮಿಳಿನ ಸ್ಟಾರ್ ನಟ ಧನುಷ್, ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ , ಕನ್ನಡದ ಸ್ಟಾರ್ ನಟ ಯಶ್ , ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.. ಹೃದಯಾಘಾತದಿಂದ ಅವರು ನಿಧನಹೊಂದಿರೋದಾಗಿ ತಿಳಿದುಬಂದಿದೆ..
ಇವರು ಸಿನಿಮಾಗಳ ಬಗ್ಗೆ ವಿಮರ್ಶೆ ನೀಡುತ್ತಾ ಹೆಸರು ಮಾಡಿದ್ದರು.. ಇವರ ವಿಮರ್ಶೆಗಾಗಿ ಹಲವರು ಕಾಯುತ್ತಿದ್ದರು.. ಹಲವು ಸಿನಿಮಾಗಳಿಗೆ ಇವರು ಉತ್ತಮ ವಿಮರ್ಶೆ ನೀಡಿದ್ದಾರೆ..
ಕೌಶಿಕ್ ನಿಧನ ಹೊಂದುವ ಕೆಲವು ಗಂಟೆಗಳ ಹಿಂದೆಯಷ್ಟೇ ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾದ ಸಿಂಗಾರ ಹಾಡಿಗೆ ರಿವ್ಯೂವ್ ನೀಡಿ ಅದ್ಭುತವಾದ ಹಾಡೆಂದು ಬರೆದುಕೊಂಡಿದ್ದರು.
ಕೌಶಿಕ್ ನಿಧನದ ಬಗ್ಗೆ ಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ , ನೀವು ಸದಾ ನನ್ನ ಕಂಟೆಂಟ್ ಅನ್ನು ಇಷ್ಟಪಟ್ಟಿದ್ದೀರಿ. ಹೋಗಿ ಬನ್ನಿ ಗೆಳೆಯ ಎಂದು ಬರೆದುಕೊಂಡಿದ್ದಾರೆ.
ಕೌಶಿಕ್ ನಿಧನದ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಸಹ ಟ್ವೀಟ್ ಮಾಡಿದ್ಧಾರೆ.. ಈ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಹೃದಯ ಒಡೆಯುವ ಸುದ್ದಿಯಿದು. ಕೌಶಿಕ್ ಎಲ್ಲರ ಮೆಚ್ಚುಗೆಯ ವ್ಯಕ್ತಿಯಾಗಿದ್ದರು ಎಂದಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್ ಸಹ ಕೌಶಿಕ್ ನಿಧನಕ್ಕೆ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.. ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ನನಗೆ ಮಾತುಗಳು ಹೊರಡುತ್ತಿಲ್ಲ. ಅವರ ಕುಟುಂಬ ಹಾಗೂ ಗೆಳೆಯರಿಗೆ ನನ್ನ ತೀವ್ರ ಸಂತಾಪಗಳು, ನೀನು ಇನ್ನಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ದುಲ್ಕರ್ ಸಲ್ಮಾನ್ ಈ ಬಗ್ಗೆ ಟ್ವೀಟ್ ಮಾಡಿ , ಇದು ಹೃದಯ ಒಡೆದು ಹೋಗುವಂಥಹಾ ವಿಷಯ. ಇದು ನಿಜವಾಗದಿರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತಲೇ ಇದ್ದೇನೆ. ನಿಮ್ಮ ಕುಟುಂಬ ಅದೆಷ್ಟು ದುಃಖದಲ್ಲಿರುತ್ತದೆ ಎಂದು ನಾನು ಊಹಿಸಬಲ್ಲೆ. ನಾವಿಬ್ಬರೂ ಟ್ವಿಟ್ಟರ್ ಮೂಲಕವೇ ಹೆಚ್ಚು ಪರಿಚಿತರು, ಕೆಲವು ಭಾರಿಯಷ್ಟೆ ಒಟ್ಟಿಗೆ ಭೇಟಿಯಾಗಿದ್ದೆವು. ನೀನು ಸದಾ ನನ್ನ ಮೇಲೆ ಸಾಕಷ್ಟು ಪ್ರೀತಿ ಸುರಿಸಿದ್ದೆ. ಜೀವನ ಬಹಳ ಚಿಕ್ಕದ್ದು, ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ನಿನ್ನ ಪ್ರೋತ್ಸಾಹಕ್ಕೆ ಧನ್ಯವಾದಗಳು ಮತ್ತು ಯಾವಾಗಲೂ ಒಳ್ಳೆಯ ಸಿನಿಮಾದ ಪರವಾಗಿ ನೀನು ನಿಲ್ಲುತ್ತಿದ್ದೆ. ಎಂದಿದ್ದಾರೆ..
ಧನುಷ್ ಟ್ವೀಟ್ ಮಾಡಿದ್ದು , “ಇದು ಹೃದಯ ವಿದ್ರಾವಕ !! ಶಾಂತಿಯಿಂದ ವಿಶ್ರಾಂತಿ ಪಡೆಯಿರಿ @LMKMovieManiac ಸಹೋದರ. ತುಂಬಾ ಬೇಗ ಹೋಗಿದ್ದಾರೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು…