Brahmasthra : ಮಹಾಕಾಳೇಶ್ವರ ದೇವಾಲಯ ಪ್ರವೇಶಿಸದಂತೆ ರಣಬೀರ್ – ಆಲಿಯಾಗೆ ತಡೆ..!!!
ಒಂದು ಕಾಲದಲ್ಲಿ ಬಾಲಿವುಡ್ ಮಾತ್ರವೇ ಭಾರತೀಯ ಸಿನಿಮಾರಂಗ ಮಿಕ್ಕೆಲ್ಲಾ ಭಾಷೆಯ ಸಿನಿಮಾರಂಗಗಳು ಲೆಕ್ಕಕ್ಕೇ ಇಲ್ಲ ಅನ್ನೋ ರೇಂಜ್ ಗೆ ಮೆರೆಯುತ್ತಿದ್ದ ಬಾಲಿವುಡ್ ಗೆ ಈಗ ಕ್ಯಾರೇ ಅನ್ನೋರಿಲ್ಲ.. ಆ ಗತಿ ಬಂದಿದೆ.. ಅವರ ಕರ್ಮಗಳೇ ಕಾರಣ ಅಂದ್ರು ತಪ್ಪಾಗಲ್ಲ.. ಈಗೆಲ್ಲಾ ಸೌತ್ ಇಂಡಸ್ಟ್ರಿ ಯುಗ.. ಬಾಲಿವುಡ್ ನಲ್ಲಿ ಯಾವುದೇ ಸಿನಿಮಾ ರಿಲೀಸ್ ಆಗಲೀ ಫ್ಲಾಪ್ ಲಿಸ್ಟ್ ಸೇರ್ತಿದೆ.. ಸೌತ್ ಸಿನಿಮಾಗಳೆದುರು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗುತ್ತಿವೆ.. ಸ್ಟಾರ್ ಗಳ ಸಿನಿಮಾಗಳಿಗೂ ಜನ ಕ್ಯಾರೇ ಅನ್ನುತ್ತಿಲ್ಲ.. ಹಾಗೆ ನೋಡಿದ್ರೆ ದಿ ಕಾಶ್ಮೀರ್ ಫೈಲ್ಸ್ ಬಿಟ್ರೆ ಭೂಲ್ ಭುಲಯ್ಯ ಸಿನಿಮಾಗಳು ಸದ್ದು ಮಾಡಿದ್ದು ಬಿಟ್ರೆ ಉಳಿದೆಲ್ಲಾ ಸಿನಿಮಾಗಳು ಸೋತಿದ್ದು ಮಾತ್ರವೇ ಅಲ್ಲ ಅಲ್ಟ್ರಾ ಡಿಸಾಸ್ಟರ್ ಎನಿಸಿಕೊಂಡಿವೆ..
ಬಾಲಿವುಡ್ ನಲ್ಲಿ ನೆಪೋಟಿಸಮ್ , ಬಾಲಿವುಡ್ ಮಾಫಿಯಾ , ಸ್ಟ್ರಗಲಿಂಗ್ ತಾರೆಯರ ಮೇಲಿನ ಅನ್ಯಾಯಗಳೇ ಬಾಲಿವುಡ್ ನ ಈ ಸ್ಥಿತಿಗೆ ಕಾರಣ , ಅತೀವ ಪಾಶ್ಚಿಮಾತ್ಯತೆ ಅವಲಂಬನೆ , ರೀಮೇಕ್ ಗೆ ಒಗ್ಗಿಕೊಂಡಿರುವುದು , ಸಂಸ್ಕೃತಿಗೆ ವಿರುದ್ಧವಾದ ಅಂಶಗಳ ಪ್ರದರ್ಶನ.. ಎಲ್ಲದಕ್ಕಿಂತಲೂ ಮಿಗಿಲಾಗಿ ಬಾಲಿವುಡ್ ನಟ ನಟಿಯರು ನೀಡುತ್ತಿರುವ ಸಂಸ್ಕೃತಿ ವಿರೋಧಿ , ಹಾಗೂ ಅತಿರೇಖದ ಹೇಳಿಕೆಗಳು..
ಅಂದ್ಹಾಗೆ ಬಾಲಿವುಡ್ ಪಾಲಿಗೆ ಸದ್ಯಕ್ಕೆ ಆಶಾ ಕಿರಣದಂತೆ ಕಾಣುತ್ತಿರುವ ರಣಬೀರ್ ಕಪೂರ್ , ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಸೆಪ್ಟೆಂಬರ್ 9 ಕ್ಕೆ 5 ಭಾಷೆಗಳಲ್ಲಿ ವಿಶ್ವಾದ್ಯಂತ ರಿಲೀಸ್ ಆಗಲಿದ್ದು , ಸಿನಿಮಾ ತಂಡವು ಪ್ರಚಾರದಲ್ಲಿ ಬ್ಯುಸಿಯಾಗಿದೆ..
ಸಿನಿಮಾ ರಿಲೀಸ್ ಗೆ ಬಾಕಿಯಿರೋದು ಇನ್ನೆರೆಡೇ ದಿನ.. ಸೆನ್ಸಾರ್ ಬೋರ್ಡ್ ನಿಂದಲೂ ಸಿನಿಮಾಗೆ ಗ್ರೀನ್ ಸಿಗ್ನಲ್ ಸಿಕ್ಕಾಗಿದೆ.. ಇದರ ಬೆನ್ನಲ್ಲೇ ಆಲಿಯಾ ಹಾಗೂ ರಣಬೀರ್ ಟೆಂಪಲ್ ರನ್ ಶುರು ಮಾಡಿದ್ದಾರೆ.. ಬಾಲಿವುಡ್ ಪಾಲಿನ ಆಶಾಕಿರಣ ಬ್ರಹ್ಮಾಸ್ತ್ರ ಸಿನಿಮಾಗೆ ಬಾಯ್ಕಾಟ್ ಕಂಟಕ ಎದುರಾಗೋ ಸಾಧ್ಯತೆ ಇದೆ..
ಅಂದ್ಹಾಗೆ ಆಲಿಯಾ ಹಾಗೂ ರಣಬೀರ್ ಅವರನ್ನ ಸೆಪ್ಟೆಂಬರ್ 06 ರ ರಾತ್ರಿ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ಅವರು ದೇವಾಲಯ ಪ್ರವೇಶದಂತೆ ಹಿಂದು ಸಂಘಟನೆಗಳ ಕಾರ್ಯಕರ್ತರು ತಡೆದಿದ್ದಾರೆ.
ರಣಬೀರ್ ಕಪೂರ್, ಆಲಿಯಾ ಭಟ್ ಹಾಗೂ ನಿರ್ದೇಶಕ ಅಯಾನ್ ಮುಖರ್ಜಿ ಒಟ್ಟಿಗೆ ನಿನ್ನೆ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ದೇವಾಲಯದ ಆವರಣದಲ್ಲಿಯೇ ಅವರನ್ನ ತಡೆ ಹಿಡಿಯಲಾಗಿದೆ.. ಪ್ರತಿಭಟನೆ ನಡೆಸಿದ ಭಜರಂಗದಳ ಕಾರ್ಯಕರ್ತರು ಅವರುಗಳನ್ನ ದೇವಾಲಯ ಪ್ರವೇಶಿಸದಂತೆ ತಡೆದಿದ್ದಾರೆ..
ರಣ್ಬೀರ್ ಕಪೂರ್ ಈ ಹಿಂದೆ ತಾವು ಗೋಮಾಂಸ ತಿನ್ನುವುದಾಗಿ , ಅದು ನನ್ನ ಫೇವರೇಟ್ ಎಂದೂ ಹೇಳಿಕೊಂಡಿದ್ದರು.. 10 ವರ್ಷದ ಅವರ ಈ ಹಳೇ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು ಸಿನಿಮಾ ನೋಡದಂತೆ ಬಹಿಷ್ಕರಿಸುವ ಕರೆಯನ್ನ ಸೋಷಿಯಲ್ ಮೀಡಿಯಾದಲ್ಲಿ ನೀಡಲಾಗಿದೆ..
ಅವರ ಇದೇ ಹೇಳಿಕೆ ಇದೀಗ ಅವರಿಗೆ ಮುಳುವಾಗುತ್ತಿದೆ.. ಅಲ್ಲದೇ ಭಜರಂಗದಳ ಕಾರ್ಯಕರ್ತರು ಾಲಿಯಾ ರಣಬೀರ್ ವಿರುದ್ಧ ಘೋಷಣೆಗಳನ್ನ ಕೂಗಿದ್ದಾರೆ.. ಜೊತೆಗೆ ಜೈ ಶ್ರೀರಾಮ್ ಘೋಷಣೆಗಳನ್ನೂ ಕೂಗಿದ್ದು , ಆಲಿಯಾ ಹಾಗೂ ರಣಬೀರ್ ಗೆ ಈ ಘಟನೆಯಿಂದಾಗಿ ಮುಜುಗರವಾಗಿದೆ.
ಸಿನಿಮಾ ಸೆಪ್ಟೆಂಬರ್ 9 ಕ್ಕೆ ದೇಶಾದ್ಯಂತ ರಿಲೀಸ್ ಆಗಲಿದೆ.. ಆದ್ರೆ ಸಿನಿಮಾಗೆ ಬಾಯ್ಕಾಟ್ ಭಯ ಶುರುವಾಗಿದೆ.. ಬಾಯ್ಕಾಟ್ ಬಿಸಿ ಲಾಲ್ ಸಿಂಗ್ ಚಡ್ಡಾ ಸಿನಿಮಾಗೂ ತಟ್ಟಿತ್ತು.. ಸಿನಿಮಾ ಫ್ಲಾಪ್ ಆಗಿತ್ತು.. ಇದೀಗ ಬಾಲಿವುಡ್ ಪಾಲಿನ ‘ಬ್ರಹ್ಮಾಸ್ತ್ರ’ ವಾಗಿರೋ ಸಿನಿಮಾಗೂ ಬಾಯ್ಕಾಟ್ ಭಯ ಹುಟ್ಟಿದೆ.. ಈ ಸಿನಿಮಾ ಬಾಲಿವುಡ್ ಚೇತರಿಕೆಗೆ ಇರುವ ಒಂದೇ ಅಸ್ತ್ರ ಎನ್ನುವ ಹೊತ್ತಲ್ಲೇ ಸಿನಿಮಾಗೆ ವಿರೋಧಿಗಳ ಭಯವೂ ಕಾಡುತ್ತಿದೆ..
5 ಭಾಷೆಗಳಲ್ಲಿ ವಿಶ್ವಾದ್ಯಂತ ರಿಲೀಸ್ ಆಗಲಿದೆ..
ಸುಮಾರು 410 ಕೋಟಿ ರೂಪಾಯಿ ಬಜೆಟ್ ನಲ್ಲಿ ಸಿನಿಮಾ ಮೂಡಿಬರುತ್ತಿದೆ.. ಹಿಂದಿ ಕನ್ನಡ ಸೇರಿ 5 ಭಾಷೆಗಳಲ್ಲಿ ರಿಲೀಸ್ ಆಗ್ತಿರುವ ಈ ಸಿನಿಮಾ ಎರೆಡು ಭಾಗಗಳಲ್ಲಿ ಬರುತ್ತಿದೆ.. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ..
ಇದೀಗ ಸಿನಿಮಾ ಹೊಸ ದಾಖಲೆ ಬರೆಯಲು ಹೊರಟಿರುವಂತೆ ಕಾಣುತ್ತಿದೆ.. ಹೌದು..! ಈ ಸಿನಿಮಾ ವಿಶ್ವಾದ್ಯಂತ ಏಕಕಾಲದಲ್ಲಿ ಸುಮಾರು 8000 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಲಿದೆ ಎನ್ನಲಾಗ್ತಿದೆ.. ಸೆಪ್ಟೆಂಬರ್ 9 ಕ್ಕೆ ಸಿನಿಮಾ ರಿಲೀಸ್ ಆಗಲಿದೆ..
ಸಿನಿಮಾ ಭಾರತದಲ್ಲಿ ಸುಮಾರು 5000 ಸ್ಕ್ರೀನ್ ಗಳಲ್ಲಿ ರಿಲೀಸ್ ಆದ್ರೆ ವಿದೇಶದಲ್ಲಿ ಸುಮಾರು 3000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣಲಿದೆ.. ಒಟ್ನಲ್ಲಿ ಸಾಲು ಸಾಲು ಸೋಲಿನಿಂದ ಕಂಗೆಟ್ಟು ಹೋಗಿರುವ ಬಾಲಿವುಡ್ ಪಾಲಿಗೆ ಬ್ರಹ್ಮಾಸ್ತ್ರ ಭರವಸೆಯ ಬೆಳಕಂತೆ ಕಾಣಿಸುತ್ತಿದೆ.. ಆದ್ರೆ ಬ್ರ್ಹಮಾಸ್ತ್ರ ಹಿಡಿದು ಬಾಲಿವುಡ್ ಮೇಲೇಳುತ್ತಾ ಮತ್ತೆ ಸೋಲಿನ ರುಚಿ ಕಾಣುತ್ತಾ ಅನ್ನೋದನ್ನ ಕಾಲ ಹಾಗೂ ಪ್ರೇಕ್ಷಕರು ತೀರ್ಮಾನ ಮಾಡುತ್ತಾರೆ..