Ott ಹಾಗೂ ಥಿಯೇಟರ್ ಗಳಲ್ಲಿ ಈ ವಾರ ರಿಲೀಸ್ ಆದ ಕನ್ನಡ ಸಿನಿಮಾಗಳು..!!
ಈ ವಾರ ಸಿನಿರಸಿಕರ ಪಾಲಿಗೆ ಹಬ್ಬ ದ್ರೂ ತಪ್ಪಾಗೋದಿಲ್ಲ.. ಎಲ್ಲಾ ಭಾಷೆಯಲ್ಲೂ ಬಹುನಿರೀಕ್ಷೆಯ ಸಿನಿಮಾಗಳು ರಿಲೀಸ್ ಆಗಿವೆ.. ಸ್ಯಾಂಡಲ್ ವುಡ್ ಅಪ್ಪು ಕೊನೆಯದಾಗಿ ನಟಿಸಿರುವ ಡಾರ್ಲಿಂಗ್ ಕೃಷ್ಣ ನಾಯಕನಾಗಿರುವ ಲಕ್ಕಿ ಮ್ಯಾನ್ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ..
ಬಾಲಿವುಡ್ ನಲ್ಲಿ ಬಾಯ್ಕಾಟ್ ನಡುವೆಯೂ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ಶೇಕ್ ಮಾಡ್ತಿದೆ.. ಇದೇ ರೀತಿ ತೆಲುಗು , ತಮಿಳು , ಮಲಯಾಳಂ ನಲ್ಲೂ ಸಿನಿಮಾಗಳು ರಿಲೀಸ್ ಆಗಿವೆ…
ಈ ನಡುವೆ ಈ ವಾರ ಒಟಿಟಿಯಲ್ಲೂ ಹಿಟ್ ಸಿನಿಮಾಗಳು ರಿಲೀಸ್ ಆಗಿವೆ.. ಹೌದು..!! ಒಟಿಟಿಯಲ್ಲೂ ಸಿನಿಮಾಗಳು ರಿಲೀಸ್ ಆಗಿ ಒಳ್ಳೆ ವೀವ್ಸ್ ಆಗ್ತಿದೆ.. ಅಂದ್ಹಾಗೆ ಕನ್ನಡ ಸಿನಿಮಾ ‘ತೂತು ಮಡಿಕೆ’ ಸಿನಿಮಾ OTT ಯಲ್ಲಿ ವೀಕ್ಷಣೆಗೆ ಲಭ್ಯವಾಗಿದೆ..
ಹೌದು..! ‘ತೂತು ಮಡಿಕೆ ಕನ್ನಡ ಸಿನಿಮಾ ಇದೇ ವಾರ VOOT ನಲ್ಲಿ ಬಿಡುಗಡೆ ಆಗಿದೆ. ಇದೇ ವರ್ಷ ಜುಲೈ ತಿಂಗಳಲ್ಲಿ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ರಾಜಕಾರಣಿಯೊಬ್ಬ ವಸ್ತುವೊಂದನ್ನು ಹುಡುಕಲು ತಂಡವೊಂದನ್ನು ನೇಮಿಸುತ್ತಾರೆ.. ಆ ವಸ್ತು ಹುಡುಕಲು ತಂಡ ಪಡುವ ಕಷ್ಟಗಳ ಕಥೆಯೇ ಈ ಸಿನಿಮಾ..
ಅಂದ್ಹಾಗೆ ಥಿಯೇಟರ್ ಗಳಲ್ಲಿ ಲಕ್ಕಿ ಮ್ಯಾನ್ ಹೊರತಾಗಿ ನಾನ್ ರೌಡಿ ಹಾಗೂ 9 ಸುಳ್ಳು ಕಥೆಗಳು ಸಿನಿಮಾಗಳು ಸಹ ರಿಲೀಸ್ ಆಗಿವೆ..