ಬ್ರಹ್ಮಾಸ್ತ್ರ ( Brahmastra ) ಬಾಲಿವುಡ್ ನ ಬಾಕ್ಸ್ ಆಫೀಸ್ ನ ಲೆಕ್ಕಾಚಾರವನ್ನ ಮುರಿಯಬಹುದು. ಆದರೆ ಚಿತ್ರಕ್ಕೆ ಕೆಲ ನ್ಯೂನತೆಗಳೂ ಇವೆ.. ಬ್ರಹ್ಮಾಸ್ತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಆದರೆ ಬೇಡಿಕೆಯ ಮತ್ತು ಪ್ರೇಕ್ಷಕರ ನಿರೀಕ್ಷೆಗಳನ್ನು ಪೂರೈಸುವಲ್ಲಿ ಎಡವಿದೆ ಎನ್ನಲಾಗ್ತಿದೆ..
ಈ ವರೆಗೂ ಸಿನಿಮಾ ವಿಶ್ವಾದ್ಯಂತ 75 ಕೋಟಿ ರೂ.ಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.. ಈ ಮೂಲಕ ಬ್ರಹ್ಮಾಸ್ತ್ರ ಭಾಗ ಒಂದು: ಶಿವ ಬಾಕ್ಸ್ ಆಫೀಸ್ನಲ್ಲಿ ಬಾಲಿವುಡ್ ಸೋಲಿಗೆ ತಾತ್ಕಾಲಿಕವಾಗಿ ಬ್ರೇಕ್ ನೀಡಿದ್ದಾರೆ.. ಹಿಂದಿ ಚಲನಚಿತ್ರೋದ್ಯಮದ ಭರವಸೆಯನ್ನು ಹೆಚ್ಚಿಸಿದೆ.
ಬಹಿಷ್ಕಾರದ ಕರೆಗಳು ಜೋರಾಗಿ ಕೇಳಿಬಂದರೂ ಸಿನಿಮಾ ತಕ್ಕ ಮಟ್ಟಿಗೆ ಪ್ರದರ್ಶನ ಕಾಣ್ತಿದೆ.. ಅಯಾನ್ ಮುಖರ್ಜಿ ಬರೆದು ನಿರ್ದೇಶಿಸಿದ ಮಹತ್ವಾಕಾಂಕ್ಷೆಯ ಟ್ರೈಲಾಜಿಯ ಮೊದಲ ಸ್ಥಾಪನೆಯು ಸದ್ಯಕ್ಕೆ ಬಾಲಿವುಡ್ ಗೆ ಚೇತರಿಕೆ ತಂದಿದೆ..