Gurushishyaru ಸೇರಿದಂತೆ ಈ ವಾರ ರಿಲೀಸ್ ಆಗಲಿರುವ ಕನ್ನಡದ ಸಿನಿಮಾಗಳು..!!!
ಈ ತಿಂಗಳು ಒಂದು ರೀತಿ ಎಲ್ಲಾ ಭಾಷೆಗಳ ಸಿನಿಮಾರಂಗಗಳಿಗೂ ಹಬ್ಬ ಎನ್ನಬಹುದು.. ಸಾಲು ಸಾಲು ಸಿನಿಮಾಗಳು ಥಿಯೇಟರ್ ಗಳಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಿ ಅಬ್ಬರಿಸುತ್ತಿವೆ..
ಹಿಂದಿಯಲ್ಲಿ ಪ್ರಮುಖವಾಗಿ ಸೆಪ್ಟೆಂಬರ್ 9 ಕ್ಕೆ ಬ್ರಹ್ಮಾಸ್ತ್ರ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಈಗಲೂ ಅಬ್ಬರಿಸುತ್ತಿದೆ..
ಇತ್ತ ಕನ್ನಡದಲ್ಲಿ ಸೆಪ್ಟೆಂಬರ್ 16 ಕ್ಕೆ ರಿಲೀಸ್ ಆದ ಮಾನ್ಸೂನ್ ರಾಗವೂ ಉತ್ತಮ ಪ್ರದರ್ಶನ ಕಾಣುತ್ತಿದೆ..
ಇದೀಗ ವಾರ ಕನ್ನಡದಲ್ಲಿ ಇನ್ನೂ ಯಾವೆಲ್ಲಾ ಸಿನಿಮಾಗಳು ರಿಲೀಸ್ ಆಗಲಿವೆ ಅಂತ ನೋಡೋದಾದ್ರೆ
ಕನ್ನಡದಲ್ಲಿ ಸೆಪ್ಟೆಂಬರ್ 23 ಕ್ಕೆ ಶರಣ್ ನಟನೆಯ ‘ ಗುರುಶಿಷ್ಯರು’ ಸಿನಿಮಾ ರಿಲೀಸ್ ಆಗಿದೆ.. ಹುಬ್ಬಳ್ಳಿಯಲ್ಲಿ ಬಹುತೇಕ ಸಿನಿಮಾ ಶೂಟಿಂಗ್ ನಡೆಯಲಿದೆ.. ಅಂದ್ಹಾಗೆ ಸಿನಿಮಾತಂಡ ಹಾಗೂ ಶರಣ್ ಈಗಿಂದಲೇ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ..
ಅಂದ್ಹಾಗೆ ದಶಕಗಳ ಹಿಂದೆ ಕನ್ನಡದಲ್ಲಿ ಇದೇ ಟೈಟಲ್ ನಲ್ಲಿ ( GuruShishyaru ) ಸಿನಿಮಾ ರಿಲೀಸ್ ಆಗಿ ಅಬ್ಬರಿಸಿತ್ತು.. ಈಗ ಮತ್ತದೇ ಟೈಟಲ್ ನಲ್ಲಿ ಸಿನಿಮಾ ಬರುತ್ತಿದ್ದು , ಅಭಿಮಾನಿಗಳ ಕಾತರತೆ ಹೆಚ್ಚಾಗಿದೆ.. ಅದ್ರಲ್ಲೂ ಶರಣ್ ಸಿನಿಮಾ ಅಂದ್ರೆ ಅದ್ರಲ್ಲೊಂದು ಕಾಮಿಡಿ ಟಚ್ ಇರಲೇ ಬೇಕು..
ಇದೊಂದು ಗ್ರಾಮೀಣ ಕ್ರೀಡೆ ಖೋ ಖೋ ಕಥೆಯಾಧಾರಿತ ಸಿನಿಮಾವಾಗಿದೆ.. ಜೊತೆಗೆ ಗುರು ಮತ್ತು ಶಿಷ್ಯಂದಿರ ನಡುವಿನ ಸಂಬಂಧದ ಬಗ್ಗೆಯ ಕಥೆಯಾಗಿದೆ. ಸಿನಿಮಾದಲ್ಲಿ ಶರಣ್ ಪಿಟಿ ಮಾಸ್ಟರ್ ಆಗಿ ಕಾಣಿಸಿಕೊಂಡಿರೋದು ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ..
ಅಂದ್ಹಾಗೆ ಗುರು ಶಿಷ್ಯರು ಬಿಟ್ಟರೆ ಇನ್ನೂ ಮೂರು ಸಿನಿಮಾಗಳು ರಿಲೀಸ್ ಆಗಲಿವೆ.. ಸ್ವಚ್ಛ ಕರ್ನಾಟಕ , ರಾಜಾ ರಾಣಿ ರೋರರ್ ರಾಕೆಟ್ , ಧಮ್ ಸಿನಿಮಾಗಳೂ ಕೂಡ ರಿಲೀಸ್ ಆಗ್ತಿದ್ದು , ಈ ವಾರ ಕನ್ನಡ ಸಿನಿಮಾ ಪ್ರಿಯರಿಗೆ ಹಬ್ಬ ಎನ್ನಬಹುದು..