ಬಹುನಿರೀಕ್ಷಿತ ತುಳು ಸಿನಿಮಾ “ಸೋಡಾ ಶರ್ಬತ್” ನ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಪ್ರೈವೇಟ್ ಚಾಲೆಂಜ್ ಖ್ಯಾತಿಯ ಜೋಡಿಯಾದ ಅರವಿಂದ್ ಬೋಳಾರ್ ಹಾಗೂ ವಾಲ್ಟರ್ ನಂದಳಿಕೆ ಸೋಡಾ ಶರ್ಬತ್ ಪೋಸ್ಟರ್ ಅನ್ನ ನವೆಂಬರ್ 10 ರಂದು ದುಬೈನ ವಿನ್ನಿ ರೆಸ್ಟೋರೆಂಟ್ ಹಾಲ್ ನಲ್ಲಿ ರಿಲೀಸ್ ಮಾಡಿದರು.. ಬಳಿಕ ಈ ಬಗ್ಗೆ ಮಾತನಾಡಿದ ಅರವಿಂದ ಬೋಳಾರ್ ಅವರು ಈ ಸಿನಿಮಾದ ನಿರ್ದೇಶಕ ಪ್ರದೀಪ್ ನನಗೆ ಬಹಳ ವರ್ಷಗಳಿಂದ ಪರಿಚಯ. ಅವರ ನಾಟಕದಲ್ಲೂ ನಟಿಸಿದ್ದೇನೆ. ಅವರ ಎಲ್ಲಾ ಸಿನಿಮಾ ಸಂಬಂಧಿ ಪ್ರಾಜೆಕ್ಟ್ಗಳಿಗೆ ನಾನು ಖಾಯಂ ಸದಸ್ಯ.
ಇದು ನನಗೆ ಸಂದ ಗೌರವ ಎಂದು ಭಾವಿಸುತ್ತೇನೆ. ಮಂಗಳೂರು ಮತ್ತು ದುಬೈನ ಹೆಸರಾಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾಗೆ ನಾವೆಲ್ಲರೂ ಬೆಂಬಲ ನೀಡಬೇಕು ಎಂದು ಹೇಳಿದ್ದಾರೆ. ಪ್ರದೀಪ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಡಯಾನಿ, ಪೌಲ್ ಮತ್ತು ಪ್ರಶಾಂತ್ ಸಹ ನಿರ್ಮಾಪಕರಾಗಿ ಈ ಸಿನಿಮಾದಲ್ಲಿ ಪ್ರದೀಪ್ ಅವರಿಗೆ ಸಹಾಯ ಮಾಡಿದ್ದಾರೆ.ಪಿಬಿಪಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, ನಿರ್ದೇಶನದ ಜೊತೆಗೆ ಪ್ರದೀಪ್ ಈ ಸಿನಿಮಾಗೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ. ತುಳುನಾಡ ಮಾಣಿಕ್ಯ ಖ್ಯಾತಿಯ ಅರವಿಂದ ಬೋಳಾರ್, ಖ್ಯಾತ ಹಾಸ್ಯ ನಟ ಭೋಜರಾಜ್ ವಾಮಂಜೂರು ಸೇರಿದಂತೆ ಅನೇಕರ ತಾರಬಳಗ ಚಿತ್ರದಲ್ಲಿದೆ.