ಎಲ್ಲಾ ಭಾಷೆಗಳಲ್ಲೂ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋ ಬಿಗ್ ಬಾಸ್.. ಅದ್ರಲ್ಲೂ ಹಿಂದಿಯಲ್ಲಿ 16 ನೇ ಸೀಸನ್ ತಯಾರಿ ನಡೆಯುತ್ತಿದೆ.. ಕನ್ನಡದಲ್ಲಿ ಒಟಿಟಿ ಮೊದಲ ಸೀಸನ್ ಮುಗಿದು ಟಿವಿಯ 9 ನೇ ಸೀಸನ್ ನಡೆಯುತ್ತಿದೆ..
ಅಂದ್ಹಾಗೆ ಬಿಗ್ ಬಾಸ್ ನಿಂದ ಸಾಕಷ್ಟು ಲಾಭ ಮಾಡಿಕೊಳ್ಳುತ್ತಾರೆ ಆಯೋಜಕರು , ವಾಹಿನಿ.. ಅದ್ರಲ್ಲೂ ಹಿಂದಿ ಬಿಗ್ ಬಾಸ್ ನಲ್ಲಿ ದುಡ್ಡಿನ ಹೊಳೆಯೇ ಹರಿದುಬರುತ್ತದೆ..
ಇನ್ನೂ ನಿರೂಪಣೆಗಾಗಿ ಸಲ್ಮಾನ್ ಖಾನ್ ದುಬಾರಿ ಸಂಭಾವನೆ ಪಡೆಯುತ್ತಾರೆ.. ಅದ್ರಲ್ಲೂ ಇತ್ತೀಚೆಗೆ ಹರಿದಾಡಿರುವ ಸುದ್ದಿ ಎಲ್ಲರೂ ಉಬ್ಬೇರಿಸುವಂತೆ ಮಾಡಿದೆ..
ಬಿಗ್ ಬಾಸ್ 16 ನಡೆಸಿಕೊಡಲು ಸಲ್ಮಾನ್ ಖಾನ್ ಬರೋಬ್ಬರಿ 1000 ಕೋಟಿ ರೂ. ತೆಗೆದುಕೊಳ್ತಿದ್ದಾರೆ ಎನ್ನಲಾಗ್ತಿದೆ..
ಈ ಬಗ್ಗೆ ಇದೀಗ ಸಲ್ಮಾನ್ ಖಾನ್ ಮಾತನಾಡಿದ್ದಾರೆ.
ನಾನು ಸಾವಿರ ಕೋಟಿ ಸಂಭಾವನೆ ಪಡೆಯುತ್ತಿದ್ದೇನೆ ಎನ್ನಲಾಗುತ್ತಿದೆ. ನಿಜಕ್ಕೂ ನನ್ನ ಜೀವನದಲ್ಲಿ ಅಷ್ಟೆಲ್ಲ ಹಣವನ್ನು ಒಟ್ಟಿಗೆ ನೋಡಿದ್ದೇ ಇಲ್ಲ.. ಒಂದು ದಿನ ನನಗೆ ಆ ಹಣ ಬರಬಹುದು ಎಂದುಕೊಳ್ಳೋಣ, ಅದು ಬಂದ ದಿನವೂ ಅದಕ್ಕೆ ತಕ್ಕಂತೆ ನನಗೆ ಖರ್ಚುಗಳಿರುತ್ತವೆ, ನನ್ನ ಲಾಯರ್ ಗಳಿಗೆ ನಾನು ಸಾಕಷ್ಟು ಹಣ ಕೊಡಬೇಕಾಗುತ್ತದೆ. ನನ್ನ ಲಾಯರ್ ಗಳು ಸಹ ಸಲ್ಮಾನ್ ಖಾನ್ ರೀತಿಯೇ, ಈ ಸಲ್ಮಾನ್ ಖಾನ್ ಸಂಪಾದಿಸುತ್ತಾನೆ, ಆ ಸಲ್ಮಾನ್ ಖಾನ್ ಗಳು ಕೊಂಡೊಯ್ಯುತ್ತಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ..
ಅಷ್ಟೇ ಅಲ್ಲ ಮಾಧ್ಯಮದವರು, ಅಭಿಮಾನಿಗಳು ಹೀಗೆಲ್ಲಾ ಹೇಳ್ತೀರಿ.. ಅದನ್ನು ಇಡಿ, ಇನ್ ಕಮ್ ಟ್ಯಾಕ್ಸ್ ನವರು ಸಹ ನೋಡುತ್ತಿರುತ್ತಾರೆ. ಅವರು ಮನೆಗೆ ಬಂದು ಪರಿಶೀಲನೆ ನಡೆಸುತ್ತಾರೆ ಆಗ ಅವರಿಗೆ ಸತ್ಯದ ಅರಿವಾಗುತ್ತದೆ. 1000 ಕೋಟಿ ಎಂದು ನೀವು ಹೇಳುತ್ತಿದ್ದೀರಿ, ಆದರೆ ಅದರ ಕಾಲು ಭಾಗದಷ್ಟು ಸಹ ನಾನು ಸಂಭಾವನೆಯಾಗಿ ತೆಗೆದುಕೊಂಡಿಲ್ಲ ಎಂದಿದ್ದಾರೆ ಸಲ್ಮಾನ್ ಖಾನ್.