ರಾಕಿಂಗ್ ಸ್ಟಾರ್ ಯಶ್ ಅವರ ಮೇನಿಯಾ ಆಲ್ ಓವರ್ ಇಂಡಿಯಾ ಇದೆ.. KGF ನಂತರ ಯಶ್ ನ್ಯಾಷನ್ಲ್ ಸ್ಟಾರ್ ಆಗಿದ್ದು , ದೇಶದ ಮೂಲೆಮೂಲೆಗಳಲ್ಲೂ ರಾಕಿ ಅಭಿಮಾನಿಗಳಿದ್ದಾರೆ..
ಯಶ್ ಮುಂದಿನ ಸಿನಿಮಾದ ( Yash19) ಅಪ್ಡೇಟ್ ಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.. KGF3ಬರುತ್ತೆ ಚರ್ಚೆಗಳು ಒಂದೆಡೆಯಾದ್ರೆ ಮಫ್ತಿ ನಿರ್ದೇಶಕ ನರ್ತನ್ ಜೊತೆಗೆ ಯಶ್ ಸಿನಿಮಾ ಮಾಡಲಿದ್ದಾರೆ ಅನ್ನೋ ಗಾಸಿಪ್ ಗಳಿದೆ.. ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ ಅನ್ನೋ ಮಾತುಗಳೂ ಇದೆ..
ಅಷ್ಟೇ ಅಲ್ದೇ ಮುಂದೆ ಯಶ್ ಹಾಗೂ ಟಾಲಿವುಡ್ ನ ಸ್ಟಾರ್ ನಟ ರಾಮ್ ಚರಣ್ ಇಬ್ಬರೂ ನರ್ತನ್ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಾರೆ ಎಂದೂ ಹೇಳಲಾಗಿತ್ತು.. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋಗಳು ಬೇರೆಯದ್ದೇ ಗಾಸಿಫ್ ಹುಟ್ಟುಹಾಕಿದ್ದು , ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ..
ಯಶ್ ಇದ್ದಕ್ಕಿದ್ದಂತೆ ಹಾಲಿವುಡ್ ಕಡೆ ಪ್ರಯಾಣ ಬೆಳೆಸಿದ್ದಾರೆ.. ಹಾಲಿವುಡ್ ನ ಖ್ಯಾತ ಆಕ್ಷನ್ ನಿರ್ದೇಶಕ ಹಾಗೂ ಸಿನಿಮಾ ನಿರ್ದೇಶಕರಾದ ಜೆಜೆ ಪೆರ್ರಿಯನ್ನು ಯಶ್ ಭೇಟಿ ಮಾಡಿದ್ದು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದ ಹಾಗೆ ಅಭಿಮಾನಿಗಳು ಉಬ್ಬೇರಿಸಿದ್ದಾರೆ..
ಅಷ್ಟೇ ಅಲ್ದೇ ಶೂಟಿಂಗ್ ಯಾರ್ಡ್ ನಲ್ಲಿ ಗನ್ ಹಿಡಿದು ಶೂಟಿಂಗ್ ಮಾಡಿರೋ ಫೋಟೋ ಕೂಡ ವೈಋಲ್ ಆಗಿದ್ದು ಅಭಿಮಾನಿಗಳು ಮತ್ತೊಮ್ಮೆ ತಮಗನಿಸಿದದ ಹಾಗೆ ಚರ್ಚೆ ಮಾಡ್ತಿದ್ದಾರೆ.. ನ್ನೂ ಹಲವರು ಯಶ್ ಮುಂದಿನ ಸಿನಿಮಾದಲ್ಲಿ ಜೆಜೆ ಪೆರ್ರಿ ಭಾಗವಾಗಲಿದ್ದಾರಾ..?? ಎಂದೆಲ್ಲಾ ಮಾತನಾಡಲಾರಂಭಿಸಿದ್ದಾರೆ..
ಯಶ್, ತಾವು ಗನ್ ಶೂಟಿಂಗ್ ಮಾಡಿರುವ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಜೆಜೆ ಪೆರ್ರಿಗೆ ಧನ್ಯವಾದ ಹೇಳಿದ್ದಾರೆ.
ಅಲ್ಲದೇ ಯಶ್ ಮುಂದೆ ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ತಾರಾ ಎಂಬ ಚರ್ಚೆಗೂ ನಡೆಯುತ್ತಿದೆ.. ಅಥವ ಹಾಲಿವುಡ್ ನಿರ್ದೇಶಕರ ಜೊತೆಗೂಡಿ ಪ್ಯಾನ್ ವರ್ಲ್ಡ್ ಸಿನಿಮಾ ಚಿಂತನೆಯಲ್ಲಿದ್ದಾರಾ ರಾಕಿಂಗ್ ಸ್ಟಾರ್ ಎಂದೇ ಮಾತನಾಡಿಕೊಳ್ತಿದ್ದಾರೆ ಫ್ಯಾನ್ಸ್..