ಸಿನಿಮಾರಂಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದರಿಗೆ ನೀಡಲಾಗುವ ರಾಷ್ಟ್ರಪ್ರಶಸ್ತಿಗೆ ಸೂರರೈ ಪೊಟ್ರು ಭಾಜನವಾಗಿದೆ.. 68 ನೇ ರಾಷ್ಟ್ರ ಪ್ರಶಸ್ತಿಗೆ ಸೂರರೈ ಪೊಟ್ರು ಸಿನಿಮಾ ತಂಡ ಭಾಜನವಾಗಿದೆ…
ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರದಿಂದ ರಾಷ್ಟ್ರ ಪ್ರಶಸ್ತಿ ಬಗ್ಗೆ ಘೋಷಣೆ ಮಾಡಲಾಗಿತ್ತು.. ಸೆಪ್ಟೆಂಬರ್ 30 ರಂದು ದೆಹಲಿಯ ವಿಗ್ಯಾನ್ ಭವನದಲ್ಲಿ ಕಲಾವಿದರಿಗೆ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಗಿದೆ..
ವಿಜೇತ ಕಲಾವಿದರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು..
ಕನ್ನಡ , ತಮಿಳು ಸೇರಿದಂತೆ ಭಾರತೀಯ ಸಿನಿಮಾರಂಗದ ಹಲವು ಕಲಾವಿದರು ರಾಷ್ಟ್ರಪ್ರಶಸ್ತಿಗೆ ಪಾತ್ರರಾದರು..
ಇನ್ನೂ ಆಸ್ಕರ್ ರೇಸ್ ಗೆ ನಾಮಿನೇಟ್ ಆಗಿದ್ದ ತಮಿಳಿನ ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾ ಈ ಬಾರಿ 4 ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದು ಮೇಲುಗೈ ಸಾಧಿಸಿದೆ..
ನಟ ಸೂರ್ಯಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.. ಸೂರರೈ ಪೊಟ್ರು ಸಿನಿಮಾದ ನಾಯಕಿ ಅಪರ್ಣಾ ಬಾಲಮುರುಳಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.. ಅತ್ಯುತ್ತಮ ಕಥಾಚಿತ್ರ ಪ್ರಶಸ್ತಿಯೂ ಸಹ ಸೂರರೈ ಪೊಟ್ರು ಸಿನಿಮಾದ ಪಾಲಾಗಿದೆ.. ಜೊತೆಗೆ ಅತ್ಯುತ್ತಮ ಚಿತ್ರಕಥೆಗಾಗಿ ಸೂರರೈ ಪೋಟ್ರು ಚಿತ್ರದ ಶಾಲಿನಿ ಉಷಾ ನಾಯರ್ ಹಾಗೂ ಸುಧಾ ಕೊಂಗರ ಅವರಿಗೂ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ…
ಅಂದ್ಹಾಗೆ ಈ ಸಿನಿಮಾಗೆ ಬಹುಭಾಷಾ ನಟಿ ಸೂರ್ಯ ಪತ್ನಿ ಜ್ಯೋತಿಕಾ ಅವರು ಬಂಡವಾಳ ಹೂಡಿದ್ದರು.. ಪ್ರಶಸ್ತಿ ಗೆದ್ದ ಸಂಭ್ರಮವನ್ನ ಸೋಷಿಯಲ್ ಮೀಡಿಯಾದಲ್ಲಿ ಮಕ್ಕಳ ಜೊತೆಗೆ ಫೋಟೋ ಶೇರ್ ಮಾಡಿ ಹಂಚಿಕೊಂಡಿದ್ದಾರೆ ಜ್ಯೋತಿಕಾ ಸೂರ್ಯ ದಂಪತಿ..