ನಿನ್ನೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮನ ಕಾರ್ಯಕ್ರಮವನ್ನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.. ಕಾರ್ಯಕ್ರಮದಲ್ಲಿ ಗುರುಕಿರಣ್ ಅವರ ಸಂಯೋಜನೆಯಲ್ಲಿ ಕನ್ನಡದ ಗಾಯಕ ಗಾಯಕಿಯರು ಅಪ್ಪು ಅವರಿಗೆ “ಗೀತನಮನ” ಸಲ್ಲಿಸಿದರು.. ಹಾಡಿನಲ್ಲಿ ಕವಿರಾಜ್ ಅವರ ಸಾಲುಗಳು ಕೂಡ ಇತ್ತು..
ಕಾರ್ಯಕ್ರಮದಲ್ಲಿ ಪರಾ ಭಾಷಾ ಸ್ಟಾರ್ ಗಳು ಸಹ ಭಾಗಿಯಾಗಿದ್ದರು.. ಸ್ಯಾಂಡಲ್ ವುಡ್ ತಾರೆಯರು ಭಾಗಿಯಾಗಿದ್ದರು.. ಸಿಎಂ ಬೊಮ್ಮಾಯಿ , ಮಾಜಿ ಸಿಎಂ ಸಿದ್ದರಾಮಯ್ಯ , ಯಡಿಯೂರಪ್ಪ ಸೇರಿದಂತೆ ರಾಜಕೀಯ ಮುಖಂಡರು , ಗಣ್ಯಾತಿ ಗಣ್ಯರು ಭಾಗಿಯಾಗಿದ್ದರು.
ಈ ಬಗ್ಗೆ ಕವಿರಾಜ್ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿ ಅಪ್ಪು ಅವರಿಗಾಗಿ ಬರೆದ ಸಾಲುಗಳನ್ನ ಹಂಚಿಕೊಂಡಿದ್ದಾರೆ..
(ನಿನ್ನೆ) “ಇಂದಿನ ‘ಪುನೀತ್ ನಮನ’ ಕಾರ್ಯಕ್ರಮದಲ್ಲಿ ಗುರುಕಿರಣ್ ಅವರ ಸಂಯೋಜನೆಯಲ್ಲಿ ಕನ್ನಡದ ಬಹುತೇಕ ಎಲ್ಲಾ ಚಾಲ್ತಿಯಲ್ಲಿರುವ ಖ್ಯಾತ ಗಾಯಕ/ಗಾಯಕಿಯರು ಒಂದಾಗಿ ಹಾಡಿದ , ಕಾಣದಂತೆ ಮಾಯವಾದನು ಹಾಡಿನ ಸಂತಾಪ ವರ್ಷನ್. ಕೊನೆಕ್ಷಣದ ಬದಲಾವಣೆಯಾಗಿ ಇಂದು ಬೆಳಿಗ್ಗೆ ತುರ್ತಾಗಿ ಬರೆದಿದ್ದು.
ಕಾಣದಂತೆ ಮಾಯವಾದರು
ನಮ್ಮ ಅಪ್ಪು ಕೈಲಾಸ ಸೇರಿಕೊಂಡರು
ನಮಗೆ ಪ್ರೀತಿ ಕೊಟ್ಟು
ನಮ್ಮನ್ನೆಲ್ಲ ಬಿಟ್ಟು
ಕಾಣದಂತೆ ಮಾಯವಾದರು
ನಟನೆಯಲ್ಲಿ ಸಾರ್ವಭೌಮರು
ನಮ್ಮ ಅಪ್ಪು
ನೀತಿಯಲ್ಲಿ ವಿನಯವಂತರು
ದಾನ ದರ್ಮ ಸೇವೆ ಮಾಡಿ
ಎಲ್ಲರೀಗೂ ಸ್ಫೂರ್ತಿ ನೀಡಿ
ಕಾಣದಂತೆ ಅಪ್ಪು ಕಾಣದಂತೆ ಮಾಯವಾದರು
ನಾಡೆ ಮೆಚ್ಚೋ ರಾಜಕುವರರು
ನಮ್ಮ ಅಪ್ಪು ಸೀದ ಸಾದಾ ಹೃದಯವಂತರು
ನಮ್ಮ ನಾಡಿನೆಲ್ಲ ಮನೆಯ
ಮುದ್ದು ಮುದ್ದು ಮಗನು ನೀವು
ಕಾಣದಂತೆ ಅಪ್ಪು ಕಾಣದಂತೆ….
ನೀವು ಇರದೆ ನಾಡು ನೊಂದಿದೆ
ಯಾಕೆ ಅಪ್ಪು
ನಮ್ಮ ಸಂಗ ಬೇಡವಾಯಿತೆ
ಹೇಗೆ ನಾವು ಮರೆಯಬೇಕು
ನಿಮ್ಮ ಶುದ್ಧ ನಗುವ ಇನ್ನು
ಕಾಣದಂತೆ ಅಪ್ಪು ಕಾಣದಂತೆ
ಯಾಕೆ ಕಾಣದಂತೆ ಮಾಯವಾದಿರೀ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ..