ಚೆನ್ನೈ : ಬಹುಭಾಷಾ ನಟಿ ಸ್ನೇಹ ಅವರಿಗೆ ಉದ್ಯಮಿಗಳಿಬ್ಬರು ಏರಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ಖುದ್ದು ನಟಿ ದೂರು ದಾಖಲು ಮಾಡಿದ್ದಾರೆ.. ಈ ಸಂಬಂಧ ಸ್ನೇಹ ಅವರು ಚೆನ್ನೈನ ಕಾಣತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..
ದೂರಿನಲ್ಲಿ ಇಬ್ಬರು ಉದ್ಯಮಿಗಳು ತಮ್ಮ ಎಕ್ಸ್ ಪೋರ್ಟ್ ಉದ್ಯಮದಲ್ಲಿ ಹಣ ತೊಡಗಿಸುವಂತೆ ಕೇಳಿಕೊಂಡ್ರು.. ಬಳಿಕ ಉತ್ತಮ ಲಾಭ ನೀಡೋದಾಗಿ ಭರವಸೆ ನಿಡಿದ್ರು.. ಅವರ ಮಾತು ನಂಬಿ ನಾನು ಕೂಡ ಸುಮಾರು 26 ಲಕ್ಷ ರೂಪಾಯಿ ಹಣವನ್ನ ಇನ್ವೆಸ್ಟ್ ಮಾಡಿದೆ.. ಆದ್ರೀಗ ಅವರು ನನ್ನ ಹಣವನ್ನ ನೀಡಿಲ್ಲ.. ಲಾಭವನ್ನೂ ನೀಡಿಲ್ಲ ಬಂಡವಾಳದ ಹಣ ಕೇಳಿದ್ರೆ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ..
ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.. ಸ್ನೇಹ ಅವರು ಕನ್ನಡದಲ್ಲಿಯೂ ಕುರುಕ್ಷೇತ್ರ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಮದುವೆ ನಂತರ ಅಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ಸ್ನೇಹ ಅವರು ಸದ್ಯ ‘ಶಾಟ್ ಬೂತ್ 3’ ಎಂಬ ಮಕ್ಕಳ ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗ್ತಾಯಿದ್ದಾರೆ.