ಪ್ರತಿಭಾನ್ವಿತ ನಿರ್ದೇಶಕ ಕಮ್ ನಟನಾಗಿ ಈಗಾಗಲೇ ಸಾಬೀತು ಮಾಡಿರುವ ಕಾಂತಾರದ ಹೀರೋ ರಿಷಬ್ ಶೆಟ್ಟಿ ಅವರ ಕೆಲಸದ ಬಗ್ಗೆ ಎರೆಡು ಮಾತಿಲ್ಲ.. ಅವರ ಶ್ರಮದ ಫಲವೇ ಕಾಂತಾರ ಸಿನಿಮಾ.. ವಿಶ್ವಾದ್ಯಂತ ಕನ್ನಡ ಹಾಗೂ ಇತರೇ ಭಾಷೆಗಳಲ್ಲಿ ಸಿನಿಮಾ ಧೂಳೆಬ್ಬಿಸುತ್ತಿದೆ.
ಈ ನಡುವೆ ರಿಷಬ್ ಶೆಟ್ಟಿ ಅವರ ನಿರ್ಮಾಣದ ಸಿನಿಮಾಗೆ 27 ನೇ ಅಂತರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿದ್ದು , ಕಾಂತಾರ ಸಕ್ಸಸ್ ಖುಷಿಯಲ್ಲಿ ರಿಷಬ್ ಅವರ ಖುಷಿಯನ್ನ ದುಪ್ಪಟ್ಟು ಮಾಡಿದೆ..
ಯಾರು ನೋಡಿದ್ರೂ ಕಾಂತಾರದ್ದೇ ಗುಣಗಾನ.. ಕಾಂತಾರ ಗುಂಗಿನಿಂದ ಹೊರಬರಲೂ ಆಗುತ್ತಿಲ್ಲ.. ಅಷ್ಟರ ಮಟ್ಟಿಗೆ ಜನರ ಮನಸ್ಸಲ್ಲಿ ಕಾಂತಾರ ಆವರಿಸಿದೆ.. ಕಾಂತಾರ ಒಂದು ಸಿನಿಮಾವಲ್ಲ.. ಅದೊಂದು ಎಮೋಷನ್.. ಕರಾವಳಿ ಸಂಸ್ಕೃತಿ , ಭೂತಾರಾಧಾನೆ , ದೈವಾರಾಧನೆಯ ಕಥೆಯೇ ಕಾಂತಾರ..
ಕಾಂತಾರ ಸಿನಿಮಾ ಕನ್ನಡವಷ್ಟೇ ಅಲ್ಲ , ಹಿಂದಿ , ತಮಿಳು , ತೆಲುಗಿನಲ್ಲೂ ಅಬ್ಬರಿಸುತ್ತಿದೆ.. ಎಲ್ಲ ಭಾಷಾ ಪ್ರೇಕ್ಷರಿಂದ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ , ರಿವ್ಯೂವ್ ಪಡೆದು ಮುಂದೆ ಸಾಗ್ತಿದೆ.. ಸಿನಿಮಾ 100 ಕೋಟಿ ಕಲೆಕ್ಷನ್ ಹಂತದಲ್ಲಿದೆ..
ಸುದೀಪ್ , ನಾನಿ , ಸಿಂಬು , ಪ್ರಭಾಸ್ , ಧನುಷ್ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಸ್ಟಾರ್ ನಟರೇ ಸಿನಿಮಾವನ್ನ ಕೊಂಡಾಡುತ್ತಿದ್ದಾರೆ.. ಅದ್ರಲ್ಲೂ ಸಿನಿಮಾದ ಕೊನೆಯ 20 ನಿಮಿಷದಲ್ಲಿ ರಿಷಬ್ ನಟನೆಗೆ ಎಲ್ಲರೂ ಫಿದಾ ಆಗಿದ್ದಾರೆ..
ಈ ನಡುವೆ ಪರಭಾಷಾಭಿಮಾನಿಗಳು ರಿಷಬ್ ಶೆಟ್ಟಿ ನಿರ್ದೇಶನ ನಟನೆಯ ಸಿನಿಮಾಗಳ ಹುಡುಕಾಟದಲ್ಲಿದ್ದಾರೆ.. ಇದೆಲ್ಲದರ ನಡುವೆ ರಿಷಬ್ ನಿರ್ಮಾಣದ ‘ಶಿವಮ್ಮ’ ಎಂಬ ಚಿತ್ರಕ್ಕೆ 27ನೇ ಬೂಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಲಭಿಸಿದೆ. ಈ ಸಿನಿಮಾವನ್ನ ಜೈ ಶಂಕರ್ ನಿರ್ದೇಶನ ಮಾಡಿದ್ದರು..
ಬೂಸಾನ್ ನಲ್ಲಿ ನಡೆಯುತ್ತಿರುವ 27ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಶಿವಮ್ಮ ಚಿತ್ರ ಆಯ್ಕೆಯಾಗಿತ್ತು. ಇದೀಗ ಸ್ಪರ್ಧೆಯಲ್ಲಿ ಗೆದ್ದಿದೆ.. ಹಳ್ಳಿಯ ಮಹಿಳೆಯೊಬ್ಬರು ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನೆಟ್ ವರ್ಕ್ ವಹಿವಾಟಿನಲ್ಲಿ ಹೂಡಿಕೆ ಮಾಡಿ, ಅದರಿಂದ ಪಡಬಾರದ ಕಷ್ಟ ಪಡುವ ಕಥೆ ಸಿನಿಮಾವಾಗಿದೆ..