ಹಿಂದಿಯಲ್ಲೂ ಕಾಂತಾರ ಮೋಡಿ ಮಾಡಿದೆ.. ಬಾಲಿವುಡ್ ಸಿನಿಮಾಗಳುಗೂ ಕಾಂತಾರ ಸೆಡ್ಡು ಹೊಡೆದಿದೆ.. ಬಾಲಿವುಡ್ ನಲ್ಲಿ ಮತ್ತೊಂದು ಕನ್ನಡದ ಸಿನಿಮಾ ಸಂಚಲನ ಸೃಷ್ಟಿಮಾಡಿದೆ..
ಕನ್ನಡ ಬಾಕ್ಸ್ ಆಫೀಸ್ ಧೂಳೆಬ್ಬಿಸಿ , ಅಬ್ಬರಿಸಿ ಬೊಬ್ಬರಿದ ಕಾಂತಾರ ಸಿನಿಮಾದ ಕ್ರೇಜ್ ನೋಡಿ ಹೊಂಬಾಳೆ ಫಿಲಮ್ಸ್ ನಿರ್ಮಾಣ ಸಂಸ್ಥೆಯೂ ಸಿನಿಮಾವನ್ನ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿಯೂ ಬಿಡುಗಡೆ ಮಾಡಿದ್ದು , ಪರ ಭಾಷೆಗಳಲ್ಲೂ ಕಾಂತಾರ ಸೌಂಡ್ ಮಾಡ್ತಿದೆ..
ಅಕ್ಟೋಬರ್ 14 ರಂದು ಹಿಂದಿ ಆವೃತ್ತಿಯಲ್ಲಿ ರಿಲೀಸ್ ಆದ ಕಾಂತಾರ ಹಿಂದಿ ಮಾರುಕಟ್ಟೆಯಲ್ಲೂ ತನ್ನ ಹವಾ ಮುಂದುವರೆಸಿದೆ.. ಆರಂಭಿಕ ದಿನದಲ್ಲಿ ಸಿನಿಮಾ 1.27 ಕೋಟಿ ರೂಪಾಯಿಗಳನ್ನ ಬಾಚಿದೆ.. ಶನಿವಾರ ಸಿನಿಮಾದ ಕಲೆಕ್ಷನ್ ನಲ್ಲಿ 130-140 ಪ್ರತಿಶತ ಹೆಚ್ಚಾಗಿದೆ..
ದಿನ 1 ರಂದು, ಕಾಂತಾರ ಹಿಂದಿ ಆವೃತ್ತಿಯು ಪರಿಣಿತಿ ಚೋಪ್ರಾರ ಕೋಡ್ ನೇಮ್ ತಿರಂಗ ಸಿನಿಮಾಗಿಂತಲೂ ಉತ್ತಮ ಕಲೆಕ್ಷನ್ ಮಾಡಿದೆ..