Ramya ಪ್ರತಿಭಾನ್ವಿತ ನಟ , ನಿರ್ದೇಶಕ ರಾಜ್ ಬಿ ಶೆಟ್ಟಿ ಜೊತೆಗೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಮತ್ತೆ ರಮ್ಯಾ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡುವುದಾಗಿ ಇತ್ತೀಚೆಗೆ ಖುದ್ದು ತಾವೇ ಅನೌನ್ಸ್ ಮಾಡಿದ್ದರು.. ಶೂಟಿಂಗ್ ಸ್ಪಾಟ್ ಕೂಡ ಫಿಕ್ಸ್ ಆಗಿ ಇನ್ನೇನು ಸಿನಿಮಾದ ಚಿತ್ರೀಕರಣ ಶುರುವಾಗಿಯೇ ಬಿಡ್ತು ಎಂದು ಎಕ್ಸೈಟ್ ಆಗಿದ್ದ ರಮ್ಯಾ ಅಭಿಮಾನಿಗಳಿಗೆ ಇದೀಗ ನಿರಾಸೆ ಎದುರಾಗಿದೆ..
ಹೌದು..!
ಮೋಹಕತಾರೆ ರಮ್ಯಾ ನಟನೆಯ ಜೊತೆಗೆ ನಿರ್ಮಾಪಕಿಯಾಗಿಯೂ ಬಡ್ತಿ ಪಡೆಯುತ್ತಿದ್ದರು.. ಅವರ ಹೊಸ ಸಂಸ್ಥೆ ಆಪಲ್ ಬಾಕ್ಸ್ ನಿರ್ಮಾಣದಲ್ಲಿ ಸಿನಿಮಾ ಬರಲಿತ್ತು..
ದೀಪಾವಳಿ ಹಬ್ಬದ ನಂತರ `ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಶೂಟಿಂಗ್ ಶುರುವಾಗಲಿದೆ. ಊಟಿ ಮತ್ತು ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಈ ಶೂಟಿಂಗ್ ಮಧ್ಯೆ ಎರಡು ದಿನವಷ್ಟೇ ಬ್ರೇಕ್ ಇರಲಿದ್ದು, ಒಂದೇ ಶೆಡ್ಯೂಲ್ನಲ್ಲಿ ಚಿತ್ರೀಕರಣ ಕಂಪ್ಲೀಟ್ ಆಗಲಿದೆ ಎನ್ನಲಾಗಿತ್ತು..
ಆದ್ರೆ ಇದೀಗ ರಮ್ಯಾ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನಲಾಗ್ತಿದೆ.. ಆದ್ರೆ ರಮ್ಯಾ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದಾರಂತೆ.. ಅವರ ಈ ನಿರ್ಧಾರದಿಂದ ರಾಜ್ ಬಿ ಶೆಟ್ಟಿ ಹಾಗೂ ಅಭಿಮಾನಿಗಳಿಗೆ ಶಾಕ್ ಆಗಿದೆ..
ಇನ್ನೂ ರಮ್ಯಾ ಅವರ ನಂತರ ಈ ಸಿನಿಮಾದಲ್ಲಿ ಅವರ ಜಾಗದಲ್ಲಿ ನಟಿಸುವುದು ಯಾರು ಎಂಬ ಕುತೂಹಲ , ಪ್ರಶ್ನೆಗಳಿಗೆ ಸದ್ಯಕ್ಕೆ ಸಿಕ್ಕಿರುವ ಉತ್ತರ ಸಿರಿ ರವಿಕುಮಾರ್…
ಯಾರು ಈ ಸಿರಿ ರವಿಕುಮಾರ್ ಎಂದು ನೋಡುವುದಾದ್ರೆ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಸಕುಟುಂಬ ಸಮೇತ’ ಸಿನಿಮಾದ ನಾಯಕಿಯಾಗಿದ್ದವರು.. ಇವರೇ ಇದೀಗ ರಮ್ಯಾ ಜಾಗಕ್ಕೆ ರೀಪ್ಲೇಸ್ ಆಗಿರುವುದು ಎನ್ನಲಾಗ್ತಿದೆ.. ನಿಗದಿಯಂತೆಯೇ ಸಿನಿಮಾದ ಶೂಟಿಂಗ್ ಶುರುವಾಗಲಿದೆ ಎನ್ನಲಾಗಿದೆ..