ಇಂದು ರಾಜ್ಯಾದ್ಯಂತ ಅಷ್ಟೇ ಅಲ್ದೇ ವಿಶ್ವಾದ್ಯಂತ ಅದ್ಧೂರಿಯಾಗಿ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಗಂಧದ ಗುಡಿ ಸಾಕ್ಷ್ಯ ಚಿತ್ರ ರಿಲೀಸ್ ಆಗಿದೆ.. ಅಭಿಮಾನಿಗಳು ಪ್ರೀತಿಯಿಂದ ಅದ್ಧೂರಿಯಾಗಿ ಸಂಭ್ರಮದಿಂದ ಗಂಧದ ಗುಡಿ ಬರಮಾಡಿಕೊಂಡಿದ್ದಾರೆ..
ಈ ಸಿನಿಮಾ ಕರುನಾಡಿಗರು , ಅಭಿಮಾನಿಗಳ ಜೊತೆಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದೆ.. ಪೇಯ್ಡ್ ಪ್ರೀಮಿಯರ್ ಶೋನಲ್ಲೇ ಬಹುತಯೇಕ ಸ್ಟಾರ್ ಗಳು ಸಿನಿಮಾವನ್ನ ವೀಕ್ಷಿಸಿದ್ದಾರೆ..
ಸೆಲೆಬ್ರಿಟಿಗಳಿಗಾಗಿಯೇ ಆಯೋಜನೆದ ಮಾಡಲಾಗಿದ್ದ ಶೋನಲ್ಲಿ ಹಲವಾರು ಸ್ಟಾರ್ ಗಳು , ತಂತ್ರಜ್ಞರು , ನಿರ್ದೇಶಕ , ನಿರ್ಮಾಕರು , ಸಿನಿಮಾರಂಗದವರು ಸಿನಿಮಾ ವೀಕ್ಷಿಸಿ , ಸೋಷಿಯಲ್ ಮೀಡಿಯಾದಲ್ಲಿ ರಿವ್ಯೂ ಬರೆದುಕೊಂಡಿದ್ದಾರೆ..
ಅಂತೆಯೇ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ ಟ್ವೀಟ್ ಮಾಡಿದ್ದಾರೆ..
ಅಪ್ಪು ಸರ್ ಹೋಗುವ ಮುಂಚೆ ಕನ್ನಡಿಗರಿಗೆ ಒಂದು ಅದ್ಭುತ ಬೀಳ್ಕೊಡುಗೆ ಕೊಟ್ಟು ಹೋಗಿದ್ದಾರೆ. ಗಂಧದಗುಡಿ ಒಂದೊಳ್ಳೆ ಬೀಳ್ಗೊಡುಗೆ ಎನ್ನಬಹುದು. ಅಪ್ಪು ಸರ್ ಪಕ್ಕ ಕೂತು ಕರ್ನಾಟಕದ ವನ ಸಂಪತ್ತು ಹಾಗೂ ಸಮುದ್ರ ಒಳಗಿರುವ ಜೀವ ಪ್ರತಿಯೊಂದನ್ನು ನೋಡಿದಂತಾಗುತ್ತದೆ. ಸಿನಿಮಾ ಹಂತ ಹಂತವಾಗಿ ನಿಮ್ಮನ್ನು ಒಳಗೆ ಕರೆದುಕೊಂಡು ಹೋಗುತ್ತದೆ.
ಕೊನೆ 40 ನಿಮಿಷ ಅವರೊಟ್ಟಿಗೆ ಇರುತ್ತೀರಾ ಅಂತಹ ಅನುಭವ ಆಗುತ್ತದೆ. ನಾವು ಅಪ್ಪು ಸರ್ನ ಬೇರೆ ಬೇರೆ ಪಾತ್ರಗಳಲ್ಲಿ ಸುಮಾರು ಸಿನಿಮಾಗಳಲ್ಲಿ ನೋಡಿದ್ದೇವೆ. ಅವರನ್ನು ಅವರಾಗಿಯೇ ನೋಡಿರಲಿಲ್ಲ. ಅವರ ನಿಜ ಜೀವನದಲ್ಲಿ ಹೇಗಿರುತ್ತಾರೆ, ಅವರನ್ನು ನಾವು ಭೇಟಿ ಮಾಡಿದಾಗ ಹೇಗೆ ನೋಡಿದ್ವಿ, ಅದನ್ನು ತೆರೆಮೇಲೆ ನೋಡಿದಂತಾಯಿತು. ಕೊನೆಯಲ್ಲಿ ಒಳ್ಳೆ ಸಂದೇಶ ಇದೆ. ನಾವು ಏನೇ ಕನಸು ಇಟ್ಟುಕೊಂಡು ಕೆಲಸ ಮಾಡಿದರೂ ಪ್ರಕೃತಿಗೂ ಏನಾದರೂ ಮಾಡಬೇಕು ಎನ್ನುವುದನ್ನು ಚೆನ್ನಾಗಿ ತೋರಿಸಿದ್ದಾರೆ ಎಂದಿದ್ದಾರೆ..