ರಾಜ್ಯಾದ್ಯಂತ ಮಾತ್ರವಲ್ಲದೇ ಇಡೀ ವಿಶ್ವಾದ್ಯಂತ ಅಪ್ಪು ಅಭಿನಯದ ಸಾಕ್ಷ್ಯ ಚಿತ್ರ ಗಂಧದ ಗುಡಿ ಅಕ್ಟೋಬರ್ 28 ಕ್ಕೆ ರಿಲೀಸ್ ಆಗಿದೆ.. ಭರ್ಜರಿ ರೆಸ್ಪಾನ್ಸ್ ಪಡೆಯುತ್ಇದ್ದು , ಫ್ಯಾನ್ಸ್ ಥಿಯೇಟರ್ ನಲ್ಲಿ ಅಪ್ಪು ಕಂಡು ಭಾವುಕರಾಗಿದ್ದಾರೆ.
ಅಭಿಮಾನಿಗಳು ಪ್ರೀತಿಯಿಂದ ಅದ್ಧೂರಿಯಾಗಿ ಸಂಭ್ರಮದಿಂದ ಗಂಧದ ಗುಡಿ ಬರಮಾಡಿಕೊಂಡಿದ್ದಾರೆ.. ಇದು ಪುನೀತ್ ರಾಜ್ ಕುಮಾರ್ ಅವರ ಕನಸಿನ ಕೂಸಾಗಿದ್ದು, ರಾಜ್ಯಾದ್ಯಂತ ಗಂಧದಗುಡಿ ಸಾಕ್ಷ್ಯಚಿತ್ರ ಪ್ರದರ್ಶನವಾಗುತ್ತಿದೆ..
ಈ ಸಿನಿಮಾ ಕರುನಾಡಿಗರು , ಅಭಿಮಾನಿಗಳ ಜೊತೆಗೆ ಭಾವನಾತ್ಮಕವಾಗಿ ಬೆಸೆದುಕೊಂಡಿದೆ.. ಪೇಯ್ಡ್ ಪ್ರೀಮಿಯರ್ ಶೋನಲ್ಲೇ ಬಹುತಯೇಕ ಸ್ಟಾರ್ ಗಳು ಸಿನಿಮಾವನ್ನ ವೀಕ್ಷಿಸಿದ್ದಾರೆ..
ಸೆಲೆಬ್ರಿಟಿಗಳಿಗಾಗಿಯೇ ಆಯೋಜನೆದ ಮಾಡಲಾಗಿದ್ದ ಶೋನಲ್ಲಿ ಹಲವಾರು ಸ್ಟಾರ್ ಗಳು , ತಂತ್ರಜ್ಞರು , ನಿರ್ದೇಶಕ , ನಿರ್ಮಾಕರು , ಸಿನಿಮಾರಂಗದವರು ಸಿನಿಮಾ ವೀಕ್ಷಿಸಿ , ಸೋಷಿಯಲ್ ಮೀಡಿಯಾದಲ್ಲಿ ರಿವ್ಯೂ ಬರೆದುಕೊಂಡಿದ್ದಾರೆ..
ಅಂದ್ಹಾಗೆ ಮೊದಲ ದಿನವೇ ಗಂಧದ ಗುಡಿ ಸಿನಿಮಾ ಬಿಡುಗಡೆ ಆದ ಮೊದಲ ದಿನ ಎರಡು ಸಾವಿರಕ್ಕೂ ಅಧಿಕ ಪ್ರದರ್ಶನ ಕಂಡಿದೆ ಎಂದು ಹೇಳಲಾಗ್ತಿದೆ..