Gandhadagudi : ಈ 4 ದಿನಗಳು ‘ಗಂಧದ ಗುಡಿ’ ಟಿಕೆಟ್ ದರ ಇಳಿಕೆ..!! ಯಾಕೆ..??
ಅಪ್ಪು ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಅಕ್ಟೋಬರ್ 28 ಕ್ಕೆ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ… ಕರ್ನಾಟಕ ವನ್ಯಸಂಪತ್ತನ್ನ ಸೆರೆ ಹಿಡಿದು ಕನ್ನಡಿಗರಿಗೆ ತೋರಿಸಿರುವ ಈ ಸಿನಿಮಾವನ್ನ ಗಾಗಲೇ ಅನೇಕ ಸ್ಟಾರ್ ಗಳು , ರಾಜಕಾರಣಿಗಳು ವೀಜ್ಷಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ..
ಈ ಸಾಕ್ಷ್ಯ ಚಿತ್ರವು ಥಿಯೇಟರ್ ಗಳಲ್ಲಿ ಹೌ ಸ್ ಫುಲ್ ಪ್ರದರ್ಶನ ಕಾಣ್ತಿದೆ.. ಸುಮಾರು 2 ಕೋಟಿ ಬಜೆಟ್ ನಲ್ಲಿ ಬಂದಿರುವ ಸಿನಿಮಾ 25 ಕೋಟಿ ಹತ್ತಿರ ಹತ್ತಿರ ಕಲೆಕ್ಷನ್ ಮಾಡಿದೆ ಅನ್ನೋದು ಸಿನಿಪಂಡಿತರ ಲೆಕ್ಕಾಚಾರವಾಗಿದೆ..
ಇದೀಗ ರಾಜ್ಯಾದ್ಯಂತ ಪ್ರತಿಯೊಬ್ಬರೂ ಸಿನಿಮಾ ವೀಕ್ಷಣೆ ಮಾಡಲಿ ಹಾಗೂ ಪರಿಸರ ಜಾಗೃತಿ ಅಳವಡಿಸಿಕೊಳ್ಳಲಿ ಅನ್ನೋ ಕಾರಣಕ್ಕೆ ಟಿಕೆಟ್ ದರದಲ್ಲಿ ಭಾರೀ ರಿಯಾಯಿತಿ ನೀಡಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು , ಗಂಧದಗುಡಿ ಅಪ್ಪು ರವರ ಒಂದು ಕನಸು ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಅವರ ಹಂಬಲ ಈ ಸಿನಿಮಾ ರೂಪಗೊಳ್ಳಲು ಕಾರಣ. ಅಪ್ಪು ಅವರ ಉದ್ದೇಶ ಈ ಸಿನಿಮಾ ಎಲ್ಲ ಕನ್ನಡಿಗರು ನೋಡಬೇಕೆಂಬುದು, ಅದರಲ್ಲೂ ಮಕ್ಕಳು ನೋಡಬೇಕು ಎಂಬುದಾಗಿದೆ. ಈ ಸಲುವಾಗಿ ನಾನು ಹಾಗೂ ಚಿತ್ರ ತಂಡ ಎಲ್ಲರೊಡನೆ ಚರ್ಚಿಸಿ ವಿತರಕರ ಹಾಗೂ ಪ್ರದರ್ಶಕರ ಸಹಕಾರದೊಂದಿಗೆ ನಮ್ಮ ಚಿತ್ರ `ಗಂಧದಗುಡಿ’ಯನ್ನು ನವೆಂಬರ್ 7 ರಿಂದ 10ರ ವರೆಗೆ ಸಿಂಗಲ್ ಸ್ಕ್ರೀನ್ ಥೀಯೇಟರ್ ಗಳಲ್ಲಿ 756 ರೂ.ಗಳಿಗೆ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ 112 ರೂ.ಗಳಿಗೆ ಕರ್ನಾಟಕ ರಾಜ್ಯಾದ್ಯಂತ ದಿನದ ಎಲ್ಲಾ ಆಟಗಳು ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ನಮ್ಮ ಮಕ್ಕಳ ನಾಳೆಗಳಿಗಾಗಿ ಕಾಡನ್ನು ಸಂರಕ್ಷಿಸೋಣ, ಗಂಧದಗುಡಿ ಯನ್ನು ತೋರಿಸೋಣ ಎಂದು ಕರೆ ಕೊಟ್ಟಿದ್ದಾರೆ.