The Kashmir Files : ವಿದೇಶಿ ಸಿನಿಮಾಗಳ ಜೊತೆಗೆ ಕಾಂಪಿಟೇಷನ್ ..!!
ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದ The Kashmir Files ಸಿನಿಮಾ ದೇಶದ ಜನರನ್ನ ಒಟ್ಟುಗೂಡಿಸಿತ್ತು..
ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು.. ದಶಕಗಳ ಹಿಂದೆ ಜಿಹಾದಿಗಳಿಂದ ಕ್ರೂರವಾಗಿ ಹಿಂಸಾರಾಕ್ಕೆ ಒಳಗಾಗಿದ್ದ , ಕಾಶ್ಮೀರ ಪಂಡಿತರು ಅನುಭವಿಸಿದಂತಹ ಕಷ್ಟಗಳನ್ನ , ಜಿಹಾದಿಗಳ ಕ್ರೂರತ್ವವನ್ನ , ಹೇಗೆ ಕಾಶ್ಮೀರಿ ಪಂಡಿತರು ತಮ್ಮದೇ ನೆಲವನ್ನ ಬಿಟ್ಟು ವಲಸೆ ಬಂದಿದ್ದರೆಂಬುದನ್ನ ಸಿನಿಮಾದಲ್ಲಿ ತೋರಿಸಲಾಗಿತ್ತು..
ಈ ಸಿನಿಮಾವನ್ನ ಜನರು ಮುಗಿಬಿದ್ದು ವೀಕ್ಷಣೆ ಮಾಡಿದ್ದರು.. ಈ ಸಿನಿಮಾಗೆ ಅನೇಕ ರಾಜ್ಯಗಳಲ್ಲಿ ತೆರಿಗೆ ವಿನಾಯ್ತಿಯನ್ನೂ ನೀಡಲಾಗಿತ್ತು.. ನಂತರ ಸಿನಿಮಾ ಒಟಿಟಿಯಲ್ಲೂ ಗೆದ್ದಿತ್ತು.. ಮಿಲಿಯನ್ ಗಟ್ಟಲೆ ವೀವ್ಸ್ ಗಳನ್ನ ಗಳಿಸಿದೆ.. ಈ ಸಿನಿಮಾ ಸುಮಾರು 20 ರಿಂದ 30 ಕೋಟಿ ಬಜೆಟ್ ನಲ್ಲಿ ತಯಾರಾಗಿತ್ತು.. ಆದ್ರೆ ಬಾಕ್ಸ್ ಆಫೀಸ್ ನಲ್ಲಿ 252 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು..
ಅಂದ್ಹಾಗೆ ಬಾಲಿವುಡ್ ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ಮಟ್ಟದ ಲಾಭ ಯಾವೊಂದು ಸಿನಿಮಾ ಕೂಡ ಮಾಡಿಲ್ಲ..
ಈ ಸಿನಿಮಾ ಬೆಂಬಲ ವ್ಯಕ್ತವಾದಂತೆಯೇ ವಿರೋಧವೂ ವ್ಯಕ್ತವಾಗಿತ್ತು.. ಅನೇಕರು ಈ ಸಿನಿಮಾವನ್ನ ವಿರೋಧ ಮಾಡಿದ್ದು ಉಂಟು..
ಇದೀಗ ಈ ಸಿನಿಮಾ
ಇದೇ ತಿಂಗಳು 20 ರಿಂದ ಐದು ದಿನಗಳ ಕಾಲ ನಡೆಯಲಿರುವ ಗೋವಾ ಚಲನಚಿತ್ರೋತ್ಸವ ಎಂದೇ ಹೆಸರುವಾಸಿಯಾಗಿರುವ IFFI ನಲ್ಲಿ ಸ್ಪರ್ಧಿಸಲಿದೆ..
ವಿದೇಶಿ ಸಿನಿಮಾಗಳ ಜೊತೆಗೆ ಈ ಸಿನಿಮಾ ಕಾಂಪೀಟ್ ಮಾಡಲಿದೆ..
ಗೋಲ್ಡನ್ ಪಿಕಾಕ್ ಸ್ಪರ್ಧೆಯಲ್ಲಿ ಒಟ್ಟು ಹದಿನೈದು ಸಿನಿಮಾಗಳಿದ್ದು, ಅದರಲ್ಲಿ ದಿ ಕಾಶ್ಮೀರ್ ಫೈಲ್ಸ್, ಬೆಂಗಾಳಿ ಸಿನಿಮಾ ದಿ ಸ್ಟೋರಿ ಟೆಲ್ಲರ್ ತಮಿಳಿನ ಕುರಂಗು ಪೆಡಲ್ ಸಿನಿಮಾ ಕೂಡ ಇದೆ..
ಈ ಮೂರು ಸಿನಿಮಾಗಳ ಜೊತೆಗೆ ವಿದೇಶಿ ಸಿನಿಮಾಗಳಾದ ಫರ್ಫೆಕ್ಟ್ ನಂಬರ್, ರೆಡ್ ಶೂ , ಎ ಮೈನರ್ , ನೋ ಎಂಡ್ , ಮೆಡಿಟರೇನಿಯನ್ ಫಿವರ್ , ವೆನ್ ದಿ ವೇವ್ಸ್ ಆರ್ ಗಾನ್ , ಐ ಹ್ಯಾವ್ ಎಲೆಕ್ಟ್ರಿಕ್ ಡ್ರೀಮ್ಸ್ , ಕೋಲ್ಡ್ ಆಸ್ ಮಾರ್ಬಲ್ , ದಿ ಲೈನ್ , ಸೆವೆನ್ ಡಾಗ್ಸ್ , ಮಾರಿಯಾ : ದಿ ಓಷನ್ ಏಂಜಲ್ , ನೆಝೌಹ್ ಸಿನಿಮಾಗಳಿವೆ.