Kannada Films : ಇಂಗ್ಲಿಷ್ ಸಿನಿಮಾಗಾಗಿ ನಮ್ಮದೇ ನೆಲದಲ್ಲಿ ಕನ್ನಡ ಸಿನಿಮಾಗಳಿಗೆ ಅನ್ಯಾಯ..!!
ಕನ್ನಡದಲ್ಲಿ ಈ ವಾರ ಸಾಲು ಸಾಳು ಸಿನಿಮಾಗಳು , ಹೊಸಬರ ಚಿತ್ರಗಳು ತೆರೆಗೆ ಬಂದಿವೆ.. ಆದ್ರೆ ಪರ ಭಾಷಾ ಅದ್ರಲ್ಲೂ ವಿದೇಶೀ ಸಿನಿಮಾಗಳೆದುರಿಗೆ ಕನ್ನಡದ ಸಿನಿಮಾಗಳು ಮಂಕಾಗಿವೆ..
ಸಿನಿಮಾಗಳಿಗೆ ಒಳ್ಳೆಯ ವಿಮರ್ಶೆ ಬಂದ್ರೂ ಸ್ಕ್ರೀನ್ ಗಳು , ಶೋ ಗಳು ಸಿಗದೇ ಪರದಾಡುವಂತಾಗಿದೆ ಅದು ಸಹ ನಮ್ಮದೇ ರಾಜ್ಯದಲ್ಲಿ..
ಕಾಂತಾರ ಆರು ವಾರಗಳ ಬಳಿಕವೂ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ನೀಡುತ್ತಿದೆ. ಇತ್ತ ಗಂಧದ ಗುಡಿ ಸಿನಿಮಾವೂ ಕೂಡ ಸೂಪರ್ ಪ್ರದರ್ಶನ ಕಾಣ್ತಿದೆ..
ಹೊಸಬರ ಸಿನಿಮಾಗಳನ್ನ ಜನ ಪ್ಪಿ ಅಪ್ಪಿಕೊಂಡಿದ್ದಾರೆ.. ಈ ಪೈಕಿ ಕಂಬ್ಳಿಹುಳ ಕೂಡ ಒಂದು.. ಆದರೆ ಇಂಗ್ಲಿಷ್ ಸಿನಿಮಾ ರಿಲೀಸ್ ಆಗಿದ್ದೇ ತಡ ಕನ್ನಡದ ಸಿನಿಮಾಗಳು ಚಿತ್ರಮಂದಿರಗಳನ್ನ ಕಳೆದುಕೊಂಡಿವೆ..
ಇಂಗ್ಲೀಷ್ ಸಿನಿಮಾ ಬ್ಲಾಕ್ ಪ್ಯಾಂಥರ್ ಬಿಡುಗಡೆ ಆಗಿದೆ. ಎಲ್ಲಾ ಕನ್ನಡ ಶೋಗಳಿಗಿಂತಲೂ ಹೆಚ್ಚು ಶೋಗಳು ಈ ಇಂಗ್ಲಿಷ್ ಸಿನಿಮಾಗೆ ಸಿಕ್ಕಿದೆ..
ಅಂದ್ಹಾಗೆ ಈ ಸಿನಿಮಾ ಕೆಲ ಭಾರತೀಯ ಭಾಷೆಗಳಿಗೂ ಡಬ್ ಆಗಿದೆ.. ಆದ್ರೆ ಕನ್ನಡಕ್ಕೆ ಡಬ್ ಆಗಿಲ್ಲವಾದ್ರೂ ಸಿನಿಮಾಗೆ ಇಷ್ಟೊಂದು ಪ್ರಾಮುಖ್ಯತೆ ನೀಡಿ ನಮ್ಮದೇ ಸಿನಿಮಾಗಳಿಗೆ ನಮ್ಮದೇ ನೆಲದಲ್ಲಿ ಅನ್ಯಾಯ ಯಾವ ನ್ಯಾಯ ಅನ್ನೋದು ಕನ್ನಡ ಸಿನಿಮಾ ಪ್ರೇಮಿಗಳ ಸಿಟ್ಟು..
ಈ ಇಂಗ್ಲಿಷ್ ಚಿತ್ರ ಬೆಂಗಳೂರಿನಲ್ಲಿ ಶನಿವಾರ ಒಟ್ಟು 215 ಶೋಗಳನ್ನು ಪಡೆದುಕೊಂಡಿದೆ. ಇದರಲ್ಲಿ ಹಲವು ಶೋಗಳು ಮೊದಲೇ ಬುಕ್ ಆಗಿದೆ.. ಶುಕ್ರವಾರ ಬಿಡುಗಡೆ ಆದ ಕನ್ನಡದ ಹೊಸ ಸಿನಿಮಾಗಳಿಗೆ ಇದರ ಅರ್ಧದಷ್ಟು ಸಹ ಶೋಗಳು ಬೆಂಗಳೂರಿನಲ್ಲಿ ಸಿಕ್ಕಿಲ್ಲ ನ್ನುವುದು ಬೇಸರದ ಸಂಗತಿ..
ಈ ಸಿನಿಮಾದಿಂದಾಗಿ ಹೊಸ ಪ್ರತಿಭೆಗಳ ಕನ್ನಡದ ಕಂಬ್ಳಿಹುಳ ಸಿನಿಮಾಗೂ ಅನ್ಯಾಯವಾಗಿದೆ.. ಕಾಂತಾರದ ಶೋಗಳ ಸಂಖ್ಯೆಯೂ ಇಳಿಕೆಯಾಗಿದೆ.. ಗಂಧದ ಗುಡಿ ಸಿನಿಮಾದ ಶೋಗಳ ಸಂಖ್ಯೆಯಲ್ಲಿ ಕಡಿಮೆಯಾಗಿದೆ..
ಸಿನಿಮಾದ 2ಡಿಯ 8 ಶೋಗಳು, ಇಂಗ್ಲೀಷ್ನ 3ಡಿಯ 216 ಶೋಗಳು, ಐಮ್ಯಾಕ್ಸ್ 3ಡಿಯ 30 ಶೋಗಳು, 4ಎಕ್ಸ್ 3ಡಿಯ 24 ಶೋಗಳು, ತಮಿಳು 3ಡಿಯ 5 ಶೋಗಳು, ಹಿಂದಿ 3ಡಿಯ 5 ಶೋಗಳು, ತೆಲುಗು 3ಡಿಯ 5 ಶೋಗಳು ಪ್ರದರ್ಶನ ಕಾಣುತ್ತಿದೆ. ಅದರಲ್ಲಿಯೂ ಈ ಸಿನಿಮಾದ 3 ಡಿ, ಎಕ್ಸ್ 3ಡಿ ಶೋಗಳ ಟಿಕೆಟ್ ಬೆಲೆಗಳು 800 ರುಪಾಯಿಗೂ ಹೆಚ್ಚಿವೆ.